ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ದಾಂಡೇಲಿಯ ವಿಜಯ ನಾಯರ್ ಹಾಗೂ ಏಸು ಪ್ರಸಾದ ಎಂಬಾತರು ವಿನಾಯಕ ಕುಡ್ನೇಕರ್ ಅವರಿಂದ ಹಣಪಡೆದು ವಂಚಿಸಿದ್ದಾರೆ. ಮಗನ ಮೇಲಿನ ವ್ಯಾಮೋಹದಿಂದ ನಿವೃತ್ತ ಅಂಚೆ ನೌಕರ ಪಾಂಡುರ0ಗ ಕುಡ್ನೇಕರ್ 3.85 ಲಕ್ಷ ರೂ ಹಣ ಕೊಟ್ಟು ಮೋಸ ಹೋಗಿದ್ದಾರೆ.
ದಾಂಡೇಲಿ ಗಾಂಧೀನಗರದ ವಿನಾಯಕ ಕುಡ್ನೇಕರ್’ಗೆ ರೈಲ್ವೆ ಇಲಾಖೆಯ ನೌಕರಿಗೆ ಪ್ರಯತ್ನ ಮಾಡುತ್ತಿದ್ದರು. ಕಾಸು ಕೊಟ್ಟು ವಾಮಮಾರ್ಗದಿಂದ ನೌಕರಿ ಗಿಟ್ಟಿಸಿಕೊಳ್ಳಲು ಅವರು ಪ್ರಯತ್ನಿಸಿದ್ದರು. ಇದಕ್ಕೆ ಅವರ ತಂದೆ ಪಾಂಡುರoಗ ಕುಡ್ನೇಕರ್ ಸಹ ಒಪ್ಪಿಗೆ ಸೂಚಿಸಿ ಹಣ ನೀಡಲು ಮುಂದಾಗಿದ್ದರು. ಈ ವಿಷಯ ಅರಿತ ವಿಜಯ ನಾಯರ್ ಹಾಗೂ ಏಸು ಪ್ರಸಾದ ಹಂತ ಹಂತವಾಗಿ 3.85 ಲಕ್ಷ ರೂ ಹಣ ಪಡೆದರು. ಆದರೆ, ನೌಕರಿ ಕೊಡಿಸಲು ಅವರಿಗೆ ರೈಲ್ವೆ ಅಧಿಕಾರಿಗಳ ಸಂಪರ್ಕವೇ ಇರಲಿಲ್ಲ. ನೌಕರಿ ಕೊಡಿಸುವ ತಾಕತ್ತು ಅವರದ್ದಾಗಿರಲಿಲ್ಲ.
2021ರ ಜುಲೈ 10ರಂದು ಮೊದಲ ಬಾರಿ ದಾಂಡೇಲಿಯ ಸೋಮಾನಿ ಸರ್ಕಲ್ ಬಳಿ ಪಾಂಡುರAಗ ಕುಡ್ನೇಕರ್ 1 ಲಕ್ಷ ರೂ ಹಣ ಕಳೆದುಕೊಂಡರು. ಅದಾಗಿ ಒಂದು ತಿಂಗಳ ನಂತರ ಬೇಗ ನೌಕರಿ ಕೊಡಿಸುವುದಕ್ಕಾಗಿ ವಿಜಯ ನಾಯರ್ ಹಾಗೂ ಏಸು ಪ್ರಸಾದ ಅವರಿಗೆ ಮತ್ತೆ 1.20 ಲಕ್ಷ ರೂ ಕೊಟ್ಟರು. ಅಗಷ್ಟ 20ರಂದು ವಿಜಯ ನಾಯರ್ ಮತ್ತೆ ಹಣ ಬೇಡಿದ್ದು, ಆಗ ಕಿಸೆಯಲ್ಲಿದ್ದ 10 ಸಾವಿರ ರೂ ಕೊಟ್ಟು ಕಳುಹಿಸಿದರು.
`ಇನ್ನೂ 15 ದಿನದಲ್ಲಿ ನೌಕರಿ ಖಚಿತ’ ಎಂದು ನಂಬಿಸಿದ ವಿಜಯ ನಾಯರ್ ಹಾಗೂ ಏಸು ಪ್ರಸಾದ ಮತ್ತೆ 1 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟರು. ಈ ಹಣ ಕೊಟ್ಟರೆ 15 ದಿನದಲ್ಲಿ ರೈಲ್ವೆ ಅಧಿಕಾರಿಗಳು ನೇಮಕಾತಿ ಪತ್ರ ಕೊಡುತ್ತಾರೆ’ ಎಂದು ಸುಳ್ಳು ಹೇಳಿ ಮೂರು ಹಂತದಲ್ಲಿ 95 ಸಾವಿರ ರೂ ಹಣಪಡೆದರು. ಆದರೆ, ಈವರೆಗೂ ವಿನಾಯಕ ಕುಡ್ನೇಕರ್ ಅವರಿಗೆ ನೌಕರಿ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ. ಹೀಗಾಗಿ ಮೋಸ ಹೋಗಿದನ್ನು ಅರಿತು ಪಾಂಡುರAಗ ಕುಡ್ನೇಕರ್ ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.
ಗಮನಿಸಿ: ಸರ್ಕಾರಿ ನೌಕರಿ ಮಾರಾಟಕ್ಕಿಲ್ಲ. ಮೋಸ ಹೋಗಬೇಡಿ!