ಕಾರವಾರದ ನೌಕಾನೆಲೆ ರಹಸ್ಯ ಸೋರಿಕೆ ಪ್ರಕರಣದಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿ ಉದ್ಯೋಗಿ ದೀಪ್ ರಾಜ್ ಚಂದ್ರ ಎಂಬಾತರನ್ನು ಕೇಂದ್ರ ಗುಪ್ತಚರ ಸಂಸ್ಥೆ ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ವೇತನ ತಾಂಡೇಲ, ಅಕ್ಷಯ ನಾಯಕ ಅವರೊಂದಿಗೆ ಸದ್ಯ ಬಂಧಿತರಾಗಿರುವ ದೀಪ ರಾಜ್ ಚಂದ್ರ ಸಂಪರ್ಕ ಹೊಂದಿದ್ದರೆ? ಎಂಬ ವಿಚಾರಣೆ ನಡೆಯುತ್ತಿದೆ.
2024ರಲ್ಲಿ ಮಾಹಿತಿ ಸೋರಿಕೆಗೆ ಸಂಬAಧಿಸಿದ0ತೆ ಎನ್‌ಐಎ ಮೊದಲು ಕಾರವಾರದ ವೇತನ್ ತಾಂಡೇಲ, ಅಂಕೋಲಾದ ಅಕ್ಷಯ ನಾಯಕ ಮತ್ತು ತೋಡೂರಿನ ಸುನೀಲ ಅವರನ್ನು ಪ್ರಶ್ನಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಕರ್ನಾಟಕದ ಕಾರವಾರ ನೌಕಾನೆಲೆಯ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬ0ಧಿಸಿದoತೆ ಮಾ 18ರಂದು ಕಾರವಾರ ಮುದುಗಾದ ವೇತನ ತಾಂಡೇಲ ಮತ್ತು ಅಂಕೋಲಾ ಹಳವಳ್ಳಿಯ ಅಕ್ಷಯ ನಾಯಕರನ್ನು ವಿಚಾರಣೆಗೊಳಪಡಿಸಿದ್ದರು.
2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಮತ್ತು ಇತರರನ್ನು ಎನ್‌ಐಎ ಬಂಧಿಸಿದ ನಂತರ ಬೇಹುಗಾರಿಕೆಯಲ್ಲಿ ಇಲ್ಲಿನವರ ಪಾತ್ರದ ಬೆಳಕಿಗೆ ಬಂದಿತ್ತು. ಆ ವೇಳೆ ವೇತನ್ ಹಾಗೂ ಅಕ್ಷಯ ಕಾರವಾರದ ಚಂಡಿಯಾ ಪ್ರದೇಶದಲ್ಲಿರುವ ಐರನ್ ಮತ್ತು ಮರ್ಕ್ಯುರಿ ಎಂಬ ಕಂಪನಿ ಮೂಲಕ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಸೀಬರ್ಡ್ ನೇವಲ್ ಬೇಸ್‌ನಲ್ಲಿರುವ ಕ್ಯಾಂಟಿನ್ ವಾಹನದ ಚಾಲಕರಾಗಿ ಸುನೀಲ್ ಕೆಲಸಕ್ಕಿದ್ದರು.
ಅವರ ಎಲ್ಲಾ ಚಟುವಟಿಕೆಗಳ ಕುರಿತು ಎನ್‌ಐಎ ಹೆಚ್ಚಿನ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿದೆ. ಪಾಕಿಸ್ತಾನಿ ಮಹಿಳಾ ಏಜೆಂಟ್ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಆರೋಪಿಗಳನ್ನು ಬಳಸಿಕೊಂಡಿರುವ ಆರೋಪವಿದ್ದು, ಜಿಲ್ಲೆಯ ಇಬ್ಬರು ಹಣಕ್ಕಾಗಿ ನೌಕಾನೆಲೆಯ ಚಿತ್ರ ಹಾಗೂ ಚಲನ-ವಲನಗಳ ಬಗ್ಗೆ ಮಾಹಿತಿ ನೀಡಿದ ಬಗ್ಗೆ ತನಿಖೆ ನಡೆಯುತ್ತಿದೆ.