ಕಳೆದ 8 ವರ್ಷಗಳಿಂದ ಪ್ರೋಪಾತ್ ಅಕಾಡೆಮಿಯವರು ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಳಿಗೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದಾರೆ. 2025ರ ಏಪ್ರಿಲ್ 1ರಿಂದ ಈ ವರ್ಷದ ಶಿಬಿರ ಶುರುವಾಗಲಿದ್ದು, ಈ ಶಿಬಿರ ಮಕ್ಕಳಿಗೆ ಅಜ್ಜಿ ಮನೆಯ ಅನುಭವ ನೀಡುತ್ತದೆ.
4 ವರ್ಷದಿಂದ 16 ವರ್ಷದ ಮಕ್ಕಳಿಗಾಗಿ ಪ್ರೋಪಾತ ಅಕಡೆಮಿಯವರು ಶಿಬಿರ ಆಯೋಜಿಸುತ್ತ ಬಂದಿದ್ದಾರೆ. ಯೋಗ, ನೀತಿ ಕಥೆ, ಶುಚಿತ್ವದ ಅರಿವು, ಇಂಗ್ಲಿಷ್ ಕಲಿಕೆ, ಅಬಾಕಸ್, ನೃತ್ಯ, ಚಿತ್ರಕಲೆ, ಚೆಸ್, ಕೇರಂ, ಹಾಡುಗಾರಿಕೆ, ಶ್ಲೋಕ ಪಠಣ, ರಂಗೋಲಿ ಕಲಿಕೆ ಸೇರಿ ಹಲವು ವಿಷಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಶಿಬಿರದ ಪ್ರವೇಶಕ್ಕೆ 1 ಸಾವಿರ ರೂ ಶುಲ್ಕವಿದ್ದು, ರಿಕ್ಷಾ-ಗೂಡ್ಸ-ಟಾಕ್ಸಿ ಚಾಲಕರ ಮಕ್ಕಳಿಗೆ ಶೇ 50ರಷ್ಟು ರಿಯಾಯತಿ ಘೋಷಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದ ಮಕ್ಕಳು, ಒಂದೇ ಮನೆಯಿಂದ ಬರುವ ಎರಡು ಮಕ್ಕಳಿಗೂ ಪ್ರವೇಶ ಶುಲ್ಕದಲ್ಲಿ ವಿಶೇಷ ವಿನಾಯಿತಿ ನೀಡಲಾಗುತ್ತದೆ.
ಪ್ರೋಪಾತ್ ಅಕಾಡೆಮಿಯವರು ಸ್ವರ್ಣ ಟ್ಯೂಶನ್ ಕ್ಲಾಸೆಸ್ ಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ವರ್ಷವೀಡಿ ವಿವಿಧ ಚಟುವಟಿಕೆ ಆಯೋಜಿಸುತ್ತಾರೆ. ಇಲ್ಲಿ ನಿರಂತರ ಅಬಾಕಾಸ್ ತರಬೇತಿ ನಡೆಯುತ್ತಿದ್ದು, ಬೇಸಿಗೆ ರಜೆಯ ಅವಧಿಯಲ್ಲಿ ವಿಶೇಷ ಶಿಬಿರ ನಡೆಸಲಾಗುತ್ತದೆ. ಬೆಂಕಿ ಇಲ್ಲದೇ ಅಡುಗೆ ಮಾಡುವುದನ್ನು ಸೇರಿ ತುರ್ತು ಸನ್ನಿವೇಶಗಳನ್ನು ಎದುರಿಸುವಿಕೆಯ ಬಗ್ಗೆ ಮಕ್ಕಳಿಗೆ ಇಲ್ಲಿ ಪ್ರಾಯೋಗಿಕ ಮಾಹಿತಿ ನೀಡಲಾಗುತ್ತದೆ. ಪ್ರತಿ ವರ್ಷ 100ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳು ಅವರಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.
ಜ್ಯೋತಿ ಸಂತೋಷ ನಾಯ್ಕ ಹಾಗೂ ಸಂತೋಷ ನಾರಾಯಣ ನಾಯ್ಕ ಈ ಶಿಬಿರದ ರೂವಾರಿ. ಸಂಧ್ಯಾ ಭಟ್ಟ ಅವರು ಇಂಗ್ಲಿಷ್ ಕಲಿಕೆಯ ಹೊಣೆ ಹೊತ್ತಿದ್ದಾರೆ. ಸುಮಂಗಲಾ ಕಲ್ಮಠ ಅವರು ಯೋಗ ತರಬೇತಿ ನಡೆಸಿಕೊಡುತ್ತಾರೆ. ಅನಂತ ಗುನಗಾ ಅವರು ಚಿತ್ರಕಲೆಯ ಕುರಿತು ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುತ್ತಾರೆ. ಹುಬ್ಬಳ್ಳಿಯ ಸಂಜನಾ ಆಚಾರ್ಯ ಹಾಗೂ ಅಮಯ್ ಖಾನಾಪುರಕುರ ಅವರು ನೃತ್ಯವನ್ನು ಕಲಿಸುತ್ತಾರೆ. ಬೆಂಕಿ ಇಲ್ಲದೇ ಅಡುಗೆ ಮಾಡುವ ವಿಧಾನದ ಬಗ್ಗೆ ರೂಪಾ ಪಾಠಣಕರ್ ಪ್ರಾಯೋಗಿಕ ತರಗತಿ ನಡೆಸುತ್ತಾರೆ. ಮಹೆಕ್ ಅವರು ಮೆಹಂದಿ ಹಾಗೂ ರಂಗೋಲಿ ತರಬೇತಿ ನೀಡುತ್ತಾರೆ.

ಇನ್ನೂ ಪ್ರತಿ ವಾರ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ವಿವಿಧ ತರಬೇತಿ ನೀಡುತ್ತಾರೆ. ಈ ಮೊದಲು ಡಾ ಸೌಮ್ಯ ಹಾಗೂ ಡಾ ಸುಚೇತಾ ಮದ್ಗುಣಿ ಅವರು ಆಗಮಿಸಿ ಮಕ್ಕಳಿಗೆ ಶುಚಿತ್ವ, ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಈ ಶಿಬಿರಕ್ಕೆ ಬಂದು ಕಾಯ್ದೆ-ಕಾನೂನುಗಳ ಬಗ್ಗೆ ಪಾಠ ಮಾಡುತ್ತಾರೆ. ಮಕ್ಕಳಿಗೆ ಒಂದು ದಿನದ ಪ್ರವಾಸ ಹಾಗೂ ಪಾಲಕರಿಗೆ ವಿವಿಧ ಆಟದ ಸ್ಪರ್ಧೆಯಿರುವುದು ಈ ಶಿಬಿರದ ಇನ್ನೊಂದು ವಿಶೇಷ. ಪ್ರತಿ ದಿನ ಬೆಳಗ್ಗೆ 10ಗಂಟೆಯಿoದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ. ಗುರುಹಿರಿಯರ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಿಸುವ ಉದ್ದೇಶದಿಂದ ಮಾತೃ ವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಈ ಶಿಬಿರಕ್ಕೆ ನಿಮ್ಮ ಮಕ್ಕಳನ್ನು ಸೇರಿಸಲು ಇಲ್ಲಿ ಫೋನ್ ಮಾಡಿ: 7619517880, 7892236019 ಅಥವಾ 7019900957
Sponsored