ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಬುಧವಾರ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ವಿಶ್ವಾಮಿತ್ರ ಹೆಗಡೆ ನಾಡಿನ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದದ್ದರು. ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ್ದರು. ದೂರದರ್ಶನ ವಾಹಿನಿಗೆ ಸಹ ಅವರು ವರದಿಗಾರರಾಗಿದ್ದರು. ಈಚೆಗೆ ಫೆಸ್ಬುಕ್ ಸೇರಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಅವರು ಸುದ್ದಿ-ಮಾಹಿತಿ ಹಾಗೂ ಅಭಿಪ್ರಾಯ ಪ್ರಸಾರ ಮಾಡುತ್ತಿದ್ದರು.
ಎರಡು ದಿನದ ಹಿಂದೆ ಅವರು ಶಿರಸಿ ನಗರಸಭೆಯ ಪೈಪ್ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊAಡಿದ್ದರು. ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಆಕ್ರೋಶವ್ಯಕ್ತಪಡಿಸಿದ್ದರು. ಶಿರಸಿ ತಾಲೂಕಿನ ಭತ್ತಗುತ್ತಿಗೆಯವರಾದ ವಿಶ್ವಾಮಿತ್ರ ಹೆಗಡೆ ಹಲವು ವಿವಾದಾತ್ಮಕ ವರದಿಗಳನ್ನು ಬಿತ್ತರಿಸಿದ್ದರು. ಕೆಲಕಾಲ ವಿಶ್ವವಾಣಿ ಪತ್ರಿಕೆಯ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾಗಿಯೂ ಅವರು ಕೆಲಸ ಮಾಡಿದ್ದರು.
ವಿಶ್ವ ವಾಹಿನಿ ಎಂಬ ಸಂಸ್ಥೆಯನ್ನು ಅವರು ನಡೆಸುತ್ತಿದ್ದರು. ಆರೋಗ್ಯವಾಗಿಯೇ ಇದ್ದ ವಿಶ್ವಾಮಿತ್ರ ಹೆಗಡೆ ಅವರು ಬುಧವಾರ ದಿಢೀರ್ ಹೃದಯಘಾತದಿಂದ ಸಾವನಪ್ಪಿದ್ದಾರೆ.