SSLC ಪರೀಕ್ಷೆ ಎದುರಿಸಿದ್ದ ಮುಂಡಗೋಡಿನ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರೀಕ್ಷೆ ಹಾಗೂ ಪರೀಕ್ಷಾ ಫಲಿತಾಂಶದ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಾಸಗಿ ವಿದ್ಯಾಸಂಸ್ಥೆಯೊOದರಲ್ಲಿ ಅರ್ಹನ್ ಬಾಹುಬಲಿ ಚಿವಟೆ (16) ಸಿಬಿಎಸ್‌ಸಿ ಆಧಾರಿತ ಶಿಕ್ಷಣ ಕಲಿಯುತ್ತಿದ್ದರು. ಕಳೆದ ವಾರ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ವೇಳೆಯಲ್ಲಿಯೂ ಅರ್ಹನ್ ಚಿವಟೆ ಸಾಕಷ್ಟು ಆತಂಕದಲ್ಲಿದ್ದು, ಜೊತೆಗಾರರು ಅವರಿಗೆ ಧೈರ್ಯ ಹೇಳಿದ್ದರು.
ಸಿಬಿಎಸ್‌ಸಿ ಆಧಾರಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗುವುದಿಲ್ಲ ಎಂಬ ಆತಂಕ ಅರ್ಹನ್ ಅವರನ್ನು ಕಾಡುತ್ತಿತ್ತು. ಫಲಿತಾಂಶದ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದ ಅರ್ಹನ್ ಅದೇ ಚಿಂತೆಯಲ್ಲಿ ಬುಧವಾರ ಬೆಳಗ್ಗೆ ನೇಣಿಗೆ ಶರಣಾದರು. ಶರಣ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿದನ್ನು ನೋಡಿದ ಅವರ ಪಾಲಕರು ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಪ್ರಯೋಜನವಾಗಲಿಲ್ಲ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಲಕರು ಹಾಗೂ ಸ್ನೇಹಿತರು ಅರ್ಹನ್ ನೆನೆದು ಕಣ್ಣೀರಾಗಿದ್ದಾರೆ.