ಮುಂಡಗೋಡದ ಬಸವರಾಜ ಬೀರವಳ್ಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಬಂದ ಕಾರಣ ಅವರು ನೇಣು ಹಾಕಿಕೊಂಡು ಪ್ರಾಣಬಿಟ್ಟಿದ್ದಾರೆ.
ಮುಂಡಗೋಡದ ಇಂದೂರುದಲ್ಲಿ ಬಸವರಾಜ ಬೀರವಳ್ಳಿ (44) ವಾಸವಾಗಿದ್ದರು. ಕಳೆದ 10 ವರ್ಷಗಳಿಂದ ಅವರು ಸಣ್ಣ ಪುಟ್ಟ ವಿಷಯಗಳಿಗೂ ಸಿಟ್ಟು ಮಾಡಿಕೊಳ್ಳುತ್ತಿದ್ದರು. ಮನೆಯವರ ಜೊತೆಯೂ ಅವರು ಜಗಳ ಮಾಡುತ್ತಿದ್ದರು. ಮಾನಸಿಕವಾಗಿ ಕುಗ್ಗಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಸಾಕಷ್ಟು ಆಸ್ಪತ್ರೆ ತಿರುಗಿದರೂ ಅವರ ಸಿಟ್ಟಿನ ಸ್ವಭಾವ ಕಡಿಮೆ ಆಗಿರಲಿಲ್ಲ. ಈಚೆಗೆ ಜೀವನದಲ್ಲಿ ಜಿಗುಪ್ಸೆ ಬಂದ ಬಗ್ಗೆಯೂ ಅವರು ಮಾತನಾಡಿದ್ದರು. ಮಾರ್ಚ 26ರಂದು ಮನೆಯ ಪಡಸಾಲೆಯಲ್ಲಿಯಲ್ಲಿನ ಜಂತಿಗೆ ನೇಣು ಹಾಕಿಕೊಂಡು ಅವರು ಸಾವನಪ್ಪಿದರು. ಈ ಬಗ್ಗೆ ಅವರ ಪತ್ನಿ ರೇಖಾ ಬೀರವಳ್ಳಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.




