ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯೋಗಪಟುಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶಸ್ತಿ ಘೋಷಿಸಿದ್ದಾರೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಇದಾಗಿದೆ.
`Prime Minister’s Award for yoga for 2025‘ ಎಂಬ ಹೆಸರಿನ ಅಡಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುU ನೀಡಿದ ಯೋಗಪಟು ಹಾಗೂ ಯೋಗ ಸಂಸ್ಥೆಯವರು ಈ ಪ್ರಶಸ್ತಿಪಡೆಯಲು ಅರ್ಹರು.
ಉತ್ತರ ಕನ್ನಡ ಜಿಲ್ಲೆಯ ಯೋಗಪಟುಗಳು ಸಹ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. https://innovateindia.mygov.in/pm-yoga-awards-2025/ ವೆಬ್ ಸೈಟಿನ ಮೂಲಕ ಆಸಕ್ತ ಯೋಗಪಟು ಹಾಗೂ ಯೋಗ ಸಂಸ್ಥೆಯವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ 31 ಕೊನೆ ದಿನ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಫೋನ್ ಮಾಡಿ ಇನ್ನಷ್ಟು ಮಾಹಿತಿಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಚೇರಿ ಸಮಯದಲ್ಲಿ ಫೋನ್ ಮಾಡಬಹುದಾದ ಸಂಖ್ಯೆ: 08382-201824. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ: 9480886551