ಅಸಹಾಯಕ ಹಾಗೂ ಅನಾಥ ಸ್ಥಿತಿಯಲ್ಲಿದ್ದ ಕುಮಟಾದ ಪಾಂಡುರoಗ ನಾಯ್ಕ ಅವರು ಇದೀಗ ಸಿದ್ದಾಪುರದ ಪುನೀತ ರಾಜಕುಮಾರ ಆಶ್ರಯಧಾಮ ಸೇರಿದ್ದಾರೆ.
ಕಳೆದ 12 ವರ್ಷಗಳಿಂದ ನಾಗರಾಜ ನಾಯ್ಕ ಅವರು ಅನಾಥರ ಸೇವೆ ಮಾಡುತ್ತಿದ್ದಾರೆ. ಶಿವಮೊಗ್ಗ, ಸಾಗರ, ಹೊಸನಗರ, ಶಿಕಾರಿಪುರ, ಹಾವೇರಿ ಸೇರಿ ಬೇರೆ ಬೇರೆ ಭಾಗದ ಅನಾಥರಿಗೆ ಅವರು ಆಶ್ರಯ ನೀಡಿದ್ದಾರೆ. ನಾಗರಾಜ ನಾಯ್ಕರ ಪತ್ನಿ ಮಮತಾ ನಾಯ್ಕ ಅವರು ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಆಶ್ರಮದಲ್ಲಿನ ಅನಾಥ ವೃದ್ಧರ ಸಾವು ಆದಾಗ ಅವರ ಅಂತ್ಯ ಸಂಸ್ಕಾರವನ್ನು ಸಹ ಈ ಕುಟುಂಬದವರು ಮಾಡುತ್ತಿದ್ದಾರೆ. ಸದ್ಯ ಸಿದ್ದಾಪುರದ ಪುನೀತ ರಾಜಕುಮಾರ ಆಶ್ರಯಧಾಮದಲ್ಲಿ 70 ವೃದ್ಧರಿದ್ದಾರೆ.
ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಗೆ ಪಾಂಡುರoಗ ನಾಯ್ಕ ಎಂಬಾತರು ದಾಖಲಾಗಿದ್ದರು. ಅತ್ಯಂತ ಅಸಾಹಯಕ ಸ್ಥಿತಿಯಲ್ಲಿದ್ದ ಅವರಿಗೆ ಆಶ್ರಯದ ಅಗತ್ಯವಿತ್ತು. ಪಾಂಡುರoಗ ನಾಯ್ಕರ ಪರಿಸ್ಥಿತಿ ನೋಡಿ ಪುನೀತ್ ರಾಜಕುಮಾರ್ ಆಶ್ರಯಧಾಮದ ನಾಗರಾಜ ನಾಯ್ಕ ಅವರಿಗೆ ಫೋನಾಯಿಸಿದರು. ಮಾರ್ಚ 27ರ ಸಂಜೆ ಶಿರಸಿಗೆ ಬಂದ ನಾಗರಾಜ ನಾಯ್ಕ ಅವರು ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ರಾತ್ರಿ 10.30ಕ್ಕೆ ಪಾಂಡುರoಗ ನಾಯ್ಕರನ್ನು ಆಶ್ರಮಕ್ಕೆ ಕರೆದೊಯ್ದರು.
ಸದ್ಯ ಆಶ್ರಮ ಸೇರಿರುವ ವ್ಯಕ್ತಿ ಕುಮಟಾ ಅರ್ಬನ್ ಬ್ಯಾಂಕ್ ಬಳಿಯ ಪಾಂಡುರoಗ ಬೀರಪ್ಪ ನಾಯ್ಕ ಎಂದು ಹೇಳಿಕೊಂಡಿದ್ದಾರೆ. ಮನೆಯಲ್ಲಿ ತಂಗಿ ಮಾತ್ರವಿದ್ದು, ಅಣ್ಣ ಎಂ ಎನ್ ನಾಯ್ಕ ಬೆಂಗಳೂರಿನಲ್ಲಿರುವ ಬಗ್ಗೆ ಹೇಳಿದ್ದಾರೆ. ಉಳಿದ ಯಾವ ಮಾಹಿತಿಯನ್ನು ನೀಡಿಲ್ಲ. ಪಾಂಡುರAಗ ನಾಯ್ಕರ ವಾರಸುದಾರರು ಪತ್ತೆಯಾಗುವವರೆಗೂ ಅವರನ್ನು ಆಶ್ರಮದಲ್ಲಿರಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಆಶ್ರಯದಾಮಕ್ಕೆ ನೆರವು ನೀಡಲು ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ.
ಆಶ್ರಯದಾಮದ ವಿಳಾಸ:
ಪುನೀತ್ ರಾಜಕುಮಾರ ಆಶ್ರಯಧಾಮ
ಅನಾಥಾಶ್ರಮ ದೇವಸ್ಥಳ, ಮುಗದೂರು
ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) – 581355
ಸಂಪರ್ಕಿಸಬಹುದಾದ ಫೋನ್ ನಂ: 9481389187 ಅಥವಾ 8073197439