ಜೊಯಿಡಾದ ತಿನೈಘಾಟ್ ಬಳಿ ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿಯಾಗಿದೆ. ಪರಿಣಾಮ ಪಿಕಪ್ ವಾಹನದಲ್ಲಿದ್ದ ರಾಮ ಕೊಡತಿ ಎಂಬಾತರು ಸಾವನಪ್ಪಿದ್ದಾರೆ.
ಬಿಹಾರದ ಗೋಪಾಲ ಸಿಂಗ್ ಎಂಬಾತರು ಬೆಳಗಾವಿ ಪಣಜಿ ಹೆದ್ದಾರಿಯಲ್ಲಿ ತಮ್ಮ ಲಾರಿ ಓಡಿಸುತ್ತಿದ್ದರು. ಮಾರ್ಚ 27ರ ನಸುಕಿನ 3.15ಕ್ಕೆ ತಿನೈಘಾಟಿನಲ್ಲಿ ಅವರು ಲಾರಿ ನಿಲ್ಲಿಸಿದ್ದರು. ಆದರೆ, ಲಾರಿಯ ಪಾರ್ಕಿಂಗ್ ಲೈಟ್ ಹಾಕುವುದನ್ನು ಮರೆತಿದ್ದರು.
ಅದೇ ಮಾರ್ಗವಾಗಿ ಬೆಳಗಾವಿಯ ಪಿಕಪ್ ಚಾಲಕ ಸಂತೋಷ ಪಾಟೀಲ ತಮ್ಮ ವಾಹನ ಓಡಿಸಿಕೊಂಡು ಬರುತ್ತಿದ್ದರು. ಕತ್ತಲಿನಲ್ಲಿ ಲಾರಿ ನಿಂತಿರುವುದನ್ನು ಕಾಣದೇ ಅವರು ಪಿಕಪ್ ವಾಹನವನ್ನು ಲಾರಿಗೆ ಗುದ್ದಿದರು. ಸಂತೋಷ ಪಾಟೀಲ ಅವರ ಜೊತೆಯಿದ್ದ ಬೆಳಗಾವಿ ಖಾನಾಪುರದ ರಾಮ ಕೊಡತಿ ಈ ಅಪಘಾತದಲ್ಲಿ ಪೆಟ್ಟು ಮಾಡಿಕೊಂಡರು. ಪಿಕಪ್ ವಾಹನದಲ್ಲಿಯೇ ಸಿಲುಕಿ ಅವರು ಸಾವನಪ್ಪಿದರು.
ರಾಮ ಕೊಡತಿ ಅವರ ಪುತ್ರ ಶಂಕರ್ ಕೊಡತಿ ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾದ ನಂತರ ಶವ ಪಡೆದರು.