ಕಳೆದ 25 ವರ್ಷಗಳಿಂದ ಭಾರತೀಯ ಸೈನ್ಯದಲ್ಲಿದ್ದ ಕಾರವಾರದ ವಿಜಯ ಥಾಮ್ಸೆ ಹೃದಯಘಾತದಿಂದ ಸಾವನಪ್ಪಿದ್ದಾರೆ. ಕರ್ತವ್ಯದ ಅವಧಿಯಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ.
44 ವರ್ಷದ ವಿಜಯ ಥಾಮ್ಸೆ ಅವರು ಕಾರವಾರದ ಕೋಡಿಭಾಗದವರಾಗಿದ್ದರು. 19ನೇ ವಯಸ್ಸಿನಲ್ಲಿ ಅವರು ಸೇನೆ ಸೇರಿದ್ದರು. ಪಂಜಾಬ್ ಪ್ರೆಂಟ್‌ಲೈನ್ ಬಟಾಲಿಯನ್’ನಲ್ಲಿ ಅವರು ನಾಯಕ್ ಸುಬೇದೆದಾರ್ ಆಗಿದ್ದರು. ಇನ್ನೂ ಮೂರು ವರ್ಷದಲ್ಲಿ ಅವರು ಸೇವೆಯಿಂದ ನಿವೃತ್ತರಾಗುವವರಿದ್ದರು.
ಸೈನ್ಯದ ಪೆರೆಡ್ ವೇಳೆ ಅವರು ಅಸ್ವಸ್ಥರಾಗಿದ್ದು, ಎದೆನೋವಿನಿಂದ ಕುಸಿದು ಬಿದ್ದರು. ಅವರನ್ನು ಇನ್ನಿತರ ಸೈನಿಕರು ಸೇರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ಸೇರುವ ಮುನ್ನವೇ ವಿಜಯ ಥಾಮ್ಸೆ ಪ್ರಾಣ ಬಿಟ್ಟರು. ಗುರುವಾರ ಅವರ ಅಂತ್ಯಕ್ರಿಯೆ ನಡೆಯಿತು.