ಯಲ್ಲಾಪುರದ ಡೊಮಗೇರಿಯಿಂದ ಹುಲಿಗನಕೊಪ್ಪ ಕಡೆ ಹೋಗಬೇಕಿದ್ದ ಬೈಕಿಗೆ ಹಂದಿ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಧಾರವಾಡದ ಸಂಜು ಯಮ್ಮಿ ಹಾಗೂ ಕಿರವತ್ತಿ ಖಾರೆವಾಡದ ರೊಂಗು ಕೊಕ್ಕರೆ ಮಾರ್ಚ 25ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ರಾತ್ರಿ 8.30ರ ಆಸುಪಾಸಿಗೆ ಡೊಮಗೇರಿ ಕ್ರಾಸಿನ ಬಳಿ ಹಂದಿ ಎದುರಾಯಿತು. ಆ ರಾತ್ರಿ ರಸ್ತೆ ದಾಡುತ್ತಿದ್ದ ಹಂದಿಗೆ ಬೈಕು ಗುದ್ದಿತು. ಪರಿಣಾಮ ಸಂಜು ಯಮ್ಮಿ ಬೈಕಿನಿಂದ ಬಹುದೂರ ಹಾರಿ ಬಿದ್ದರು. ರೊಂಗು ಕೊಕ್ಕರೆ ಬೈಕಿನ ಅಡಿಗೆ ಬಿದ್ದರು. ಸಂಜು ಯಮ್ಮಿ ಅವರು ಗಂಭೀರವಾಗಿ ಗಾಯ ಮಾಡಿಕೊಂಡರು. ರಂಗು ಕೊಕ್ಕರೆ ಚಿಕ್ಕಪುಟ್ಟ ಪೆಟ್ಟು ಮಾಡಿಕೊಂಡು ಬಚಾವಾದರು.
ಚಿಕಿತ್ಸೆ ಪಡೆದ ರೊಂಗು ಕೊಕ್ಕರೆ ಹಿರಿಯರ ಹಂದಿ ಕಾಟದ ಬಗ್ಗೆ ವಿವರಿಸಿದರು. ಅಪಘಾತದ ಬಗ್ಗೆ ಪೊಲೀಸ್ ದೂರು ನೀಡುವಂತೆ ಊರಿನವರು ಹೇಳಿದ ಕಾರಣ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು.
ಭಾಗ್ವತರ ಕಾರಿಗೆ ಬುಲೆರೋ ಡಿಕ್ಕಿ!
ಕುಮಟಾದ ವ್ಯಾಪಾರಿ ಸೀತಾರಾಮ ಭಾಗ್ವತ್ ಅವರ ಕಾರು ಹೊನ್ನಾವರದಲ್ಲಿ ಅಪಘಾತವಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ.
ಕುಮಟಾ ಬಂದರು ರಸ್ತೆಯ ಸೀತಾರಾಮ ಭಾಗ್ವತ್ ಅವರು ಏಪ್ರಿಲ್ 13ರ ರಾತ್ರಿ ಹೊನ್ನಾವರಕ್ಕೆ ಬಂದಿದ್ದರು. ಇಲ್ಲಿನ ಶ್ರೀಕುಮಾರ ಪೆಟ್ರೋಲ್ ಬಂಕ್ ಎದುರು ಅವರು ಕಾರು ತಿರುಗಿಸುವ ಪ್ರಯತ್ನ ಮಾಡಿದರು. ಕಾರಿನ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸುವಾಗ ಹಿಂದಿನಿoದ ಬಂದ ಬುಲೇರೋ ಗುಡ್ಸ್ ಕಾರಿಗೆ ಗುದ್ದಿತು. ಗುದ್ದಿದ ಬುಲೆರೋ ಚಾಲಕ `ತನಗೂ ಇದಕ್ಕೂ ಸಂಬoಧವೇ ಇಲ್ಲ’ ಎಂಬoತೆ ವರ್ತಿಸಿದರು. ಕಾರಿನ ಒಳಗಿದ್ದವರಿಗೆ ಏನಾಯಿತು? ಎಂದು ಸಹ ಆತ ಗಮನಿಸಲಿಲ್ಲ. ಬುಲೆರೋ ಸಹ ನಿಲ್ಲಿಸದೇ ಅಲ್ಲಿಂದ ಪರಾರಿಯಾದರು. ಕಾರು ಜಖಂ ಆದ ಕಾರಣ ಸೀತಾರಾಮ ಭಾಗ್ವತ್ ಅವರು ಸಿಟ್ಟಾದರು. ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಅಪರಿಚಿತ ಬುಲೆರೋ ಚಾಲಕನ ವಿರುದ್ಧ ದೂರು ನೀಡಿದರು.
ಶಿವಮೊಗ್ಗ ಸವಾರನ ದುಡುಕುತನ: ಸರ್ಕಾರಿ ಶಿಕ್ಷಕನ ಸೊಂಟಕ್ಕೆ ಗಾಯ!
ಕುಮಟಾದ ಬೆಟ್ಟುಳ್ಳಿಯ ಸರ್ಕಾರಿ ಶಾಲೆ ಶಿಕ್ಷಕ ಮಂಜುನಾಥ ನಾಯ್ಕ ಅವರಿಗೆ ಅಂಕೋಲಾದಲ್ಲಿ ಅಪಘಾತವಾಗಿದೆ. ಶಿವಮೊಗ್ಗದ ಭೀಮರಗೌಡ ಅವರು ಮಂಜುನಾಥ ನಾಯ್ಕರ ಬೈಕಿಗೆ ತಮ್ಮ ಬೈಕ್ ಗುದ್ದಿ, ತಾವು ಪೆಟ್ಟು ಮಾಡಿಕೊಂಡಿದ್ದಾರೆ.
ಮoಜುನಾಥ ನಾಯ್ಕ ಅವರು ಏಪ್ರಿಲ್ 14ರಂದು ಅಂಕೋಲಾ ವಂದಿಗೆ ಡಿಪೋ ಕ್ರಾಸಿನ ಬಳಿ ಸಂಚರಿಸುತ್ತಿದ್ದರು. ಅವರ ಬೈಕಿನಲ್ಲಿ ಗೋವಿಂದ ಗೌಡ ಅವರು ಜೊತೆಯಾಗಿದ್ದರು. ಕುಮಟಾದಿಂದ ಕಾರವಾರ ಕಡೆ ಹೋಗುತ್ತಿದ್ದ ಭೀಮರಗೌಡ ಅವರು ಶಿಕ್ಷಕ ಮಂಜುನಾಥ ನಾಯ್ಕರ ಬೈಕಿಗೆ ತಮ್ಮ ಬೈಕ್ ಡಿಕ್ಕಿ ಹೊಡೆದರು. ಎರಡು ಬೈಕಿನವರು ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡರು. ಈ ಪೈಕಿ ಮಂಜುನಾಥ ನಾಯ್ಕ ಅವರ ಬಲ ಕೈ ಹಾಗೂ ಸೊಂಟಕ್ಕೆ ಗಾಯವಾದವು. ಮಂಜುನಾಥ ನಾಯ್ಕ ಅವರ ಜೊತೆಗಿದ್ದ ಗೋವಿಂದ ಗೌಡ ಅವರು ಅಪಘಾತದಲ್ಲಿ ಗಾಯಗೊಂಡರು. ಅಪಘಾತಕ್ಕೆ ಕಾರಣರಾದ ಭೀಮರಗೌಡ ಅವರು ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದರು.