6
  • Latest
Permission to conduct Matka: Jail for policeman who extended his hand for 22 thousand!

ಮಟ್ಕಾ ನಡೆಸಲು ಅನುಮತಿ: 22 ಸಾವಿರಕ್ಕೆ ಕೈ ಚಾಚಿದ ಪೊಲೀಸಪ್ಪನಿಗೆ ಜೈಲು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಟ್ಕಾ ನಡೆಸಲು ಅನುಮತಿ: 22 ಸಾವಿರಕ್ಕೆ ಕೈ ಚಾಚಿದ ಪೊಲೀಸಪ್ಪನಿಗೆ ಜೈಲು!

AchyutKumar by AchyutKumar
in ಸ್ಥಳೀಯ
Permission to conduct Matka: Jail for policeman who extended his hand for 22 thousand!

ಕಾನೂನುಬಾಹಿರ ಮಟ್ಕಾ ತಡೆಯುವುದನ್ನು ಬಿಟ್ಟು ಮಟ್ಕಾ ಆಡಿಸುವವರ ಬಳಿ ಎರಡು ವಾರಕ್ಕೆ 22 ಸಾವಿರ ರೂ ಲಂಚ ಬೇಡಿದ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ADVERTISEMENT

ಭಟ್ಕಳ ಶಾಖೆಯ ಪಿಎಲ್‌ಡಿ ಬ್ಯಾಂಕಿನ ಪಿಗ್ಮಿ ಎಜೆಂಟರಾಗಿ ಹೊನ್ನಾವರದಲ್ಲಿ ಚಂದ್ರಹಾಸ ನಾಯ್ಕ ಅವರು ಕೆಲಸ ಮಾಡುತ್ತಿದ್ದರು. ಅನಿವಾರ್ಯತೆಗೆ ಸಿಲುಕಿದ ಅವರು ಪಿಗ್ಮಿ ಹಣದ ಜೊತೆ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದರು. ಗೂಡಂಗಡಿಗಳ ಮೂಲಕ ಮಟ್ಕಾ ಹಣ ಸಂಗ್ರಹಿಸಿ ಅದನ್ನು ತಲುಪಿಸಬೇಕಾದವರಿಗೆ ತಲುಪಿಸುವ ಮಟ್ಕಾ ಬುಕ್ಕಿಯಾಗಿ ಚಂದ್ರಹಾಸ ನಾಯ್ಕ ಕೆಲಸ ಮಾಡುತ್ತಿದ್ದರು. 2017ರಲ್ಲಿ ಈ ವಿಷಯ ಅರಿತ ಹೊನ್ನಾವರ ಸಿಪಿಐ ಕಚೇರಿಯ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ `ಪ್ರತಿ ಎರಡು ವಾರಕ್ಕೆ 22 ಸಾವಿರ ರೂ ತಮಗೆ ನೀಡಬೇಕು’ ಎಂದು ಚಂದ್ರಹಾಸ ನಾಯ್ಕರ ಬಳಿ ತಾಕೀತು ಮಾಡಿದ್ದರು. `ಹೊನ್ನಾವರ ಸಿಪಿಐ ಅವರಿಗೆ ಹಣ ಕೊಡಬೇಕು’ ಎಂದು ಮುರುಳೀಧರ ನಾಯ್ಕ ನಂಬಿಸಿದ್ದರು.

ಇದಕ್ಕೆ ಚಂದ್ರಹಾಸ ನಾಯ್ಕ ಸಹ ಒಪ್ಪಿದ್ದರು. `ಸೋಮವಾರ ಹಣ ಕೊಡುವೆ’ ಎಂದು ಚಂದ್ರಹಾಸ ನಾಯ್ಕ ಮಾತು ಕೊಟ್ಟಿದ್ದರು. ಆದರೆ, ಇದಕ್ಕೆ ಮುರುಳೀಧರ ನಾಯ್ಕ ಒಪ್ಪಿಗೆ ಸೂಚಿಸಿರಲಿಲ್ಲ. `ಕೂಡಲೇ ಹಣ ಕೊಡಬೇಕು’ ಎಂದು ದುಂಬಾಲು ಬಿದ್ದಿದ್ದರು. ಪದೇ ಪದೇ ಫೋನ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಅದರಂತೆ, 2017ರ ನವೆಂಬರ್ 18ರಂದು 22 ಸಾವಿರ ರೂ ಹಣವನ್ನು ವಸೂಲಿ ಮಾಡಿದ್ದರು. ಈ ವೇಳೆ ಭ್ರಷ್ಟಾಚಾರ ನಿಗ್ರಹದಳದವರು ದಾಳಿ ನಡೆಸಿ, ಆ ಹಣವನ್ನು ವಶಕ್ಕೆ ಪಡೆದಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯವೂ 68 ದಾಖಲೆಗಳನ್ನು ಗಮನಿಸಿತು.

Advertisement. Scroll to continue reading.

ಲೋಕಾಯುಕ್ತರ ಪರವಾಗಿ ಎಲ್ ಎಂ ಪ್ರಭು ಅವರು ವಾದ ಮಂಡಿಸಿದರು. ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಲಂಚಪಡೆದಿರುವುದನ್ನು ಅವರು ಸಾಭೀತು ಮಾಡಿದರು. ಈ ಪ್ರಕರಣದ ವಾದ ಆಲಿಸಿದ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ಮುರುಳೀಧರ ನಾಯ್ಕ ಅವರು ನೀಡಿದ ಮುಚ್ಚಳಿಕೆಯನ್ನು ಒಪ್ಪಲಿಲ್ಲ. ಮುರುಳೀಧರ ನಾಯ್ಕ ಅವರ ಜಾಮೀನು ಸಹ ರದ್ದುಪಡಿಸಿ ಜೈಲು ಶಿಕ್ಷೆ ಪ್ರಕಟಿಸಿದರು. ಮುರುಳೀಧರ ನಾಯ್ಕ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ ನ್ಯಾಯಾಲಯ 1ವರ್ಷದ 6 ತಿಂಗಳ ಶಿಕ್ಷೆ ವಿಧಿಸಿತು. ಜೊತೆಗೆ 10 ಸಾವಿರ ರೂ ದಂಡ ಪಾವತಿಸಬೇಕು ಎಂದು ಸಹ ಆದೇಶಿತು. ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿಯಾಗಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಮುರುಳೀಧರ ನಾಯ್ಕ ಅವರಿಗೆ ಸೂಚಿಸಿತು.

Advertisement. Scroll to continue reading.
Previous Post

ಅರಬ್ಬಿ ಅಲೆ: ಸಮುದ್ರಕ್ಕೆ ಬಿದ್ದ ಮೀನುಗಾರ ಸಾವು!

Next Post

ಹಾಲಿನ ವಾಹನದಲ್ಲಿ ಹಸು ಸಾಗಾಟ: ಉಸಿರುಗಟ್ಟಿ ಸಾವನಪ್ಪಿದ ಐದು ಜಾನುವಾರು!

Next Post
Cows being transported in a milk truck Five cattle suffocated to death!

ಹಾಲಿನ ವಾಹನದಲ್ಲಿ ಹಸು ಸಾಗಾಟ: ಉಸಿರುಗಟ್ಟಿ ಸಾವನಪ್ಪಿದ ಐದು ಜಾನುವಾರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ