6

ಜೋಗದ ಅಡಿ ಸೆಲ್ಪಿ ಹುಚ್ಚು: ಅಪಾಯಕ್ಕೆ ಸಿಲುಕಿದವರಿಗೆ ಅಪರ ಜಿಲ್ಲಾಧಿಕಾರಿಗಳ ಪಾಠ!

ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಜೋಗ ಜಲಪಾತದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದವರಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಬಿಸಿ ಮುಟ್ಟಿಸಿದ್ದಾರೆ.

ಶುಕ್ರವಾರ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅದರಲ್ಲಿ ಕೆಲವರು ಅಲ್ಲಿ ಅಳವಡಿಸಲಾದ ಗೇಟ್ ಹಾರಿ ಮುಂದೆ ಚಲಿಸಿದ್ದರು. ಅಪಾಯಕಾರಿ ಪ್ರದೇಶದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದವರಿಗೆ ಅಪರ ಜಿಲ್ಲಾಧಿಕಾರಿ ಕ್ಲಾಸ್ ತೆಗೆದುಕೊಂಡರು.

ಪ್ರವಾಸಿಗರಿಗೆ ಅಪಾಯ ಆಗದಂತೆ ತಡೆಯಲು ಅಲ್ಲಿ ಕಬ್ಬಿಣದ ಗೇಟ್ ಅಳವಡಿಸಲಾಗಿದೆ. ಗೇಟ್ ದಾಟಿ ಮುಂದೆ ಹೋಗದಂತೆ ಸೂಚಿಸಲಾಗಿದೆ. ಅದಾಗಿಯೂ ಕೆಲವರು ತಮ್ಮ ಸಾಹಸ ಪ್ರದರ್ಶನಕ್ಕಾಗಿ ಅಪಾಯದ ಕಡೆ ಹೋಗುತ್ತಿದ್ದಾರೆ. ಕಬ್ಬಿಣದ ಗೇಟ್ ಅಳವಡಿಸಿ ಬಂದ್ ಮಾಡಿದ್ದರೂ ಅಪಾಯಕಾರಿ ಸ್ಥಳಕ್ಕೆ ತೆರಳಿ ಫೋಟೋ ಹೊಡೆಯುತ್ತಿದ್ದ ಪ್ರವಾಸಿಗರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಸಿದ್ದಾಪುರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಜೋಗ ಜಲಪಾತದ ಕೆಳಗಿನ ಗೇಟ್‌ನ್ನು ಬಂದ್ ಮಾಡಿರುವುದನ್ನು ಗಮನಿಸಿದರು. `ಗೇಟ್ ಬಂದ್ ಇದ್ದರೂ ಕೆಲವರು ಅಲ್ಲಿ ಹೋಗಿರುವುದು ಹೇಗೆ?’ ಎಂದು ಅಲ್ಲಿದ್ದವರನ್ನು ಪ್ರಶ್ನಿಸಿದರು. `ಗೇಟ್ ಹಾರಿ ಮುಂದೆ ಹೋಗಿದ್ದೇವೆ’ ಎಂದು ಯುವಕರು ಉತ್ತರಿಸಿದ್ದು, ಆ ವೇಳೆ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page