ಶಿರಸಿ ಬೆಟ್ಟಕೊಪ್ಪದ ತುಳಸಿ ಹೆಗಡೆ ಅವರಿಗೆ ಇನ್ನೊಂದು ಪ್ರಶಸ್ತಿ ಸಿಕ್ಕಿದೆ. ಈ ಬಾರಿ ತುಳಸಿ ಹೆಗಡೆ ಅವರು ಗ್ಲೋಬಲ್ ಅವಾರ್ಡನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
ಚೈನೈನ ಹಿಂದುಸ್ತಾನ್ ಹಾಗೂ ಚಾರ್ಲಿಸ್ ಗ್ರೂಪ್ ಸಹಯೋಗದಲ್ಲಿ ಸಿ `ಗ್ಲೋಬಲ್ ಚೈಲ್ಡ್ ಪ್ರೋಡಿಜಿ ಅವಾರ್ಡ’ ನೀಡಲಾಗುತ್ತಿದೆ. ಜಗತ್ತಿನ 130 ದೇಶಗಳಲ್ಲಿ ಕಲೆ, ಕ್ರೀಡೆ, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಇಲ್ಲಿ ಗುರುತಿಸಲಾಗುತ್ತದೆ. ಈ ಅವಾರ್ಡಗೆ ಇದೀಗ ಶಿರಸಿಯ ಯಕ್ಷ ಪ್ರತಿಭೆ ತುಳಸಿ ಹೆಗಡೆ ಆಯ್ಕೆಯಾಗಿದ್ದಾರೆ.
3ನೇ ವಯಸ್ಸಿನಲ್ಲಿ ವಿಶ್ವಶಾಂತಿಗಾಗಿ ಯಕ್ಷಗಾನ ಪ್ರದರ್ಶಿಸಿದ ತುಳಸಿ ಹೆಗಡೆ ಕಳೆದ 10 ವರ್ಷಗಳಿಂದ ವಿಶ್ವಶಾಂತಿಗಾಗಿ ಯಕ್ಷ ರೂಪಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಕನ್ನಡಿಗರ ಹೆಮ್ಮೆಯ ಕಲೆಯಾದ ಯಕ್ಷಗಾನದ ಮೂಲಕ ವಿಶ್ವಶಾಂತಿ ಸಂದೇಶ ಸಾರುವ ಕಾರಣಕ್ಕೆ ಜಾಗತಿಕ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ತುಳಸಿ ಹೆಗಡೆ ಅವರು ಆಯ್ಕೆಯಾಗಿದ್ದಾರೆ. ಜೂನ್ 26ರಂದು ಯುನೈಟೆಡ್ ಕಿಂಗ್ ಡಮ್ ನ ಬ್ರಿಟಿಷ್ ಪಾರ್ಲಿಮೆಂಟ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.