1 ಕೆಜಿಗೂ ಅಧಿಕ ಗಾಂಜಾ ಹಿಡಿದು ಅಲೆದಾಡುತ್ತಿದ್ದ ಇಬ್ಬರನ್ನು ದಾಂಡೇಲಿ ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.
ಮಂಗಳವಾರ ದಾಂಡೇಲಿಯ ಐಪಿಎಂ ಗೇಟಿನ ಬಳಿ ನೋಲಾಪೂರದ ಮಕಾಂದಾರ ಗಲ್ಲಿಯ ವಸೀಮ್ ಇಸಾಕ ಮುಜಾವರ (27) ಹಾಗೂ ಸುಭಾಶನಗರದ ಶಾನವಾಜ ಅಯಾನ ಇಮ್ತಿಯಾಜ ಶೇಖ (22) ಗಾಂಜಾ ಹಿಡಿದು ಗಿರಾಕಿ ಹುಡುಕುತ್ತಿದ್ದರು. ಈ ಇಬ್ಬರ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಪಿಐ ಜಯಪಾಲ ಪಾಟೀಲ ಅವರು ಪಿಎಸ್‌ಐ ಅಮೀನಸಾಬ್ ಅತ್ತಾರ್ ಅವರನ್ನು ಕಾರ್ಯಾಚರಣೆಗೆ ಕಳುಹಿಸಿದರು.
ಪಿಎಸ್‌ಐ ಕಿರಣ ಪಾಟೀಲ ಜೊತೆ ಸಿಬ್ಬಂದಿ ರಮೇಶ ನಿಂಬರಗಿ, ಇಮ್ರಾನ ಕಂಬಾರಗಣವಿ, ಕೃಷ್ಣ ಬೆಳ್ಳುವರಿ, ಮೆಹಬೂಬ ಕಿಲ್ಲೇದಾರ, ಶಾಸಪ್ಪ, ಪ್ರಸನ್ನಕುಮಾರ, ಬಸವರಾಜ ತೇಲಸಂಗ ಹಾಗೂ ಜೀಪು ಚಾಲಕ ಮಹಾಂತೇಶ ಜಾಮಗೌಡ ಸೇರಿ ಗಾಂಜಾ ಮಾರಾಟಗಾರರನ್ನು ಹಿಡಿದರು. ವಸೀಮ್ ಇಸಾಕ ಮುಜಾವರ ಹಾಗೂ ಶಾನವಾಜ ಅಯಾನ ಇಮ್ತಿಯಾಜ ಶೇಖ ಅವರನ್ನು ತಡಕಾಡಿದಾಗ ಅಂದಾಜು 60 ಸಾವಿರ ರೂ ಮೌಲ್ಯದ 1.198 ಕೆಜಿ ಗಾಂಜಾ ಸಿಕ್ಕಿತು.
ಗಾಂಜಾ ಮಾರಾಟ ಮಾಡಿ ದುಡಿದಿದ್ದ 550ರೂ ಹಣವನ್ನು ಪೊಲೀಸರು ವಶಕ್ಕೆಪಡೆದರು. ಅನೇಕರಿಗೆ ಗಾಂಜಾ ಮಾರಿ ಅವರ ಬದುಕು ಹಾಳು ಮಾಡುತ್ತಿದ್ದ ಈ ಇಬ್ಬರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದರು. ದಾಂಡೇಲಿ ಪೊಲೀಸರ ಈ ಕಾರ್ಯಾಚರಣೆಯ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ ಅಧೀಕ್ಷಕ ಕೃಷ್ಣಮೂರ್ತಿ ಜಿ, ಜಗದೀಶ ಎಂ ಹಾಗೂ ದಾಂಡೇಲಿ ಉಪವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಕಂಡಿ ಮೆಚ್ಚುಗೆವ್ಯಕ್ತಪಡಿಸಿದರು.