ಮುರುಡೇಶ್ವರದಿಂದ ಹುಬ್ಬಳ್ಳಿಗೆ ದೇವರ ಮೂರ್ತಿ ನಿರ್ಮಾಣದ ಕಲ್ಲು ಒಯ್ಯುತ್ತಿದ್ದ ಲಾರಿ ಯಲ್ಲಾಪುರದಲ್ಲಿ ಅಪಘಾತವಾಗಿದೆ.
ಭಟ್ಕಳದ ಮುರುಡೇಶ್ವರ ಬಳಿಯ ಉತ್ತರಕೊಪ್ಪದ ನಾಗೇಂದ್ರ ಬಂಡಿಗೇರಿ ಅವರು ಲಾರಿಯೊಂದರಲ್ಲಿ ದೇವರ ಮೂರ್ತಿ ರಚನೆಯ ಕಲ್ಲುಗಳನ್ನು ಸಾಗಿಸುತ್ತಿದ್ದರು. ಆ ಲಾರಿಗೆ ಮುಂಡಗೋಡು ಬಾಚಣಗಿ ಮಜ್ಜಿಗೇರಿಯ ಸೋಮಂತ ದೊಡ್ಡಮನಿ ಅವರು ಕ್ಲೀನರ್ ಆಗಿದ್ದರು. ಮುರುಡೇಶ್ವರದಿಂದ ಹೊರಟ ಲಾರಿ ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗಬೇಕಿದ್ದು, ಇಡಗುಂದಿಯ ಬಳಿ ಅಪಘಾತವಾಯಿತು.
ಇಡಗುಂದಿ ಶಾಲೆಯ ಬಳಿ ರಸ್ತೆ ಪಕ್ಕದ ಗಿಡಕ್ಕೆ ಲಾರಿ ಡಿಕ್ಕಿಯಾಯಿತು. ನಂತರ ಆ ಲಾರಿ ಗಟಾರಕ್ಕೆ ಉರುಳಿತು. ಈ ಅಪಘಾತದಲ್ಲಿ ಕ್ಲೀನರ್ ಸೋಮಂತ ದೊಡ್ಡಮನಿ ಗಾಯಗೊಂಡರು. ಲಾರಿಯೂ ಜಖಂ ಆಯಿತು. ಚಿಕಿತ್ಸೆಪಡೆದ ಸೋಮಂತ ಅವರು ಲಾರಿ ಮಾಲಕರಿಗೆ ಈ ಬಗ್ಗೆ ತಿಳಿಸಿದರು. ಚಾಲಕನ ದುಡುಕುತನವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರಿಗೂ ದೂರು ನೀಡಿದರು.