6
  • Latest
ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

AchyutKumar by AchyutKumar
in ರಾಜ್ಯ
ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

ಈಚೆಗೆ ಶಿರಸಿಯಲ್ಲಿ ವಿದ್ಯುತ್ ಅವಘಡದಿಂದ ನಡೆದ ಅಗ್ನಿ ದುರಂತದ ಚಿತ್ರಣ

ವಿದ್ಯುತ್ ಉತ್ಪಾದನೆ ಮೂಲಕ ದೇಶಕ್ಕೆ ಕೊಡುಗೆ ನೀಡುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವೂ ಹೆಚ್ಚಾಗಿದೆ. ವಿದ್ಯುತ್ ಬಳಕೆಗಾರರ ನಿರ್ಲಕ್ಷ್ಯದಿಂದ ಜನ-ಜಾನುವಾರುಗಳು ವಿದ್ಯುತ್ ಅವಘಡಗಳಿಗೆ ಬಲಿಯಾಗುತ್ತಿದ್ದಾರೆ.

ADVERTISEMENT

ಸರ್ಕಾರಿ ಕಡತದಲ್ಲಿನ ಅಂಕಿ ಸಂಖ್ಯೆಗಳ ಪ್ರಕಾರ ಒಂದೇ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಐವರು ವಿದ್ಯುತ್ ಅವಘಡದಿಂದ ಸಾವನಪ್ಪಿದ್ದಾರೆ. 32 ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಅಸುನೀಗಿವೆ. ಈ ಬಗ್ಗೆ ಅಧ್ಯಯನ ನಡೆಸಿದಾಗ `ಅನುಭವ ಇಲ್ಲದ ಜನ ವಿದ್ಯುತ್ ನಿರ್ವಹಣೆಯ ಸಾಹಸ’ ನಡೆಸಿ ಆಪತ್ತಿಗೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ಸುರಕ್ಷತೆಯಿಲ್ಲದೇ ನೀರಿನ ಪಂಪು ಅಳವಡಿಕೆ, ಮೋಟಾರ್ ನಿರ್ವಹಣೆಯಲ್ಲಿನ ಲೋಪದಂಥಹ ಗಂಭೀರ ಕಾರಣಗಳೊಂದಿಗೆ ವಿದ್ಯುತ್ ತಂತಿ ಮಾರ್ಗ ಬಳಸಿ ಬಟ್ಟೆ ಒಣಗಿಸುವ ಧೈರ್ಯ ಮಾಡುವುದು ಸಹ ಸಾವು-ನೋವುಗಳಿಗೆ ಮುಖ್ಯ ಕಾರಣವಾಗಿದೆ.

ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿರುವ ಅವಧಿಯಲ್ಲಿ ನಡೆಯುವ ಅಗ್ನಿ ದುರಂತಗಳು ದೊಡ್ಡ ಪ್ರಮಾಣದ ಹಾನಿ ಉಂಟು ಮಾಡುತ್ತಿವೆ. ಬಹುತೇಕ ಅಗ್ನಿ ಅವಘಡಗಳು ವಿದ್ಯುತ್ ವಲಯದಿಂದಲೇ ಆಗುತ್ತಿವೆ. ಇದರೊಂದಿಗೆ ಅನಧಿಕೃತವಾಗಿ ವಿದ್ಯುತ್ ಕಂಬ ಹತ್ತುವುದು, ಮುಖ್ಯ ಪ್ಯೂಸ್ ಅಳವಡಿಸುವುದು, ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದು, ವಿದ್ಯುತ್ ಕಂಬದ ಸಮೀಪದ ಮರದ ರೆಂಬೆ-ಕೊoಬೆ ಗಮನಿಸಿಯೂ ಮೌನವಾಗಿರುವುದು ಬೋರ್‌ವೆಲ್’ಗೆ ಅಳವಡಿಸಿರುವ ಮೋಟಾರ್ ಗೌಂಡಿAಗ್ ಆಗುವುದು, ಹಸಿ ಮರದ ಕಟ್ಟಿಗೆಗಳಿಂದ ವಿದ್ಯುತ್ ತಂತಿಗಳನ್ನು ತಾಕುವುದು, ಹೊಸ ಮನೆಗಳ ನಿರ್ಮಾಣ ಸಂದರ್ಭದಲ್ಲಿ ಗೋಡೆ ಕೊರೆಯುವ ಯಂತ್ರಗಳಿoದ ಆಗುವ ಅಪಾಯವೂ ಸಾವು-ನೋವುಗಳಿಗೆ ಕಾರಣವಾಗಿದೆ.

Advertisement. Scroll to continue reading.

ಈ ಬಗ್ಗೆ ಹೆಸ್ಕಾಂ ಆಗಾಗ ಜಾಗೃತಿ ಮೂಡಿಸಿದರೂ ಜನ ತಪ್ಪು ಕೆಲಸ ಮಾಡುವುದನ್ನು ಬಿಟ್ಟಿಲ್ಲ. ಹೀಗಾಗಿ 2024-25ನೇ ಸಾಲಿನಲ್ಲಿಯೂ ಈವರೆಗೆ 65 ವಿದ್ಯುತ್ ಅವಘಡಗಳು ನಡೆದಿದೆ. ಆ ಪೈಕಿ 5 ಜನ ಸಾವನಪ್ಪಿದ್ದಾರೆ. 13 ಜನ ಗಾಯಗೊಂಡಿದ್ದಾರೆ. 15 ಆಸ್ತಿಗಳಿಗೆ ಹಾನಿಯಾಗಿದ್ದು, ಬೆಳೆಗಳೆಲ್ಲವೂ ಸುಟ್ಟು ಕರಕಲಾಗಿದೆ. ಇನ್ನೂ ಅನೇಕ ಪ್ರಕರಣಗಳ ಬಗ್ಗೆ ಜನ ಹೆಸ್ಕಾಂ ಕಚೇರಿಗೆ ಮಾಹಿತಿ ನೀಡಿಲ್ಲ. ಹೀಗಾಗಿ ಆ ಅಂಕಿ-ಅoಶಗಳು ಇಲ್ಲಿ ಸೇರಿಲ್ಲ.

Advertisement. Scroll to continue reading.

ಇನ್ನೂ ಹಲವು ಬಾರಿ ಹೆಸ್ಕಾಂ ನಿರ್ಲಕ್ಷö್ಯದಿಂದಲೂ ವಿದ್ಯುತ್ ಅವಘಡ ನಡೆಯುತ್ತದೆ. ವಿದ್ಯುತ್ ತಂತಿ ಹರಿದು ಬೀಳುವುದು, ವಿದ್ಯುತ್ ಸೋರಿಕೆ, ವಿದ್ಯುತ್ ಸರಬರಾಜು ತಂತಿಯಲ್ಲಿನ ದೋಷ, ಶಾರ್ಟ ಸರ್ಕೀಟಿನಿಂದಾಗುವ ಅಗ್ನಿ ಅವಘಡಗಳ ಬಗ್ಗೆ ಆಗಾಗ ವರದಿಯಾಗುತ್ತಲೇ ಇದೆ. ವಿದ್ಯುತ್ ಅವಘಡದಿಂದ ಸಾವು-ನೋವು ಸಂಭವಿಸಿದಾಗ ಹೆಸ್ಕಾಂ ಪರಿಹಾರ ನೀಡುತ್ತದೆ. ಆದರೆ, ಆದ ನಷ್ಟಕ್ಕೆ ಸರ್ಕಾರ ನೀಡುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹಾಕಿದ ಹಾಗೇ. ಹೀಗಾಗಿ ವಿದ್ಯುತ್ ಅವಘಡ ತಪ್ಪಿಸಲು ಸದಾ ಜಾಗೃತವಾಗಿರುವುದು ಮಾತ್ರ ಪರಿಹಾರ.

ಗಮನಿಸಿ: ವಿದ್ಯುತ್ ಬಳಸುವಾಗ ಎಚ್ಚರವಹಿಸಿ.. ನಿಮ್ಮ ಜೀವದ ಜೊತೆ ಆಸ್ತಿ-ಪಾಸ್ತಿಗಳನ್ನು ರಕ್ಷಿಸಿ

Previous Post

ಕಾರವಾರ ಪ್ರವೇಶಿಸಿದ ವಿದೇಶಿ ಹಡಗು: ಸಮುದ್ರದಲ್ಲಿ ಸಿಕ್ಕಿಬಿದ್ದ ಪಾಪಿಸ್ತಾನದ ಪ್ರಜೆ!

Next Post

ಹೆಸರು ಬೇರೆ.. ಊರು ಬೇರೆ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಂಡಾಡಿ`ಗುoಡ’!

Next Post
The name is different.. The town is different Undadi `guoda' caught in Bangalore!

ಹೆಸರು ಬೇರೆ.. ಊರು ಬೇರೆ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಂಡಾಡಿ`ಗುoಡ'!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ