ನಾನಾ ಭಾಷೆ, ನಾನಾ ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಪರಿಚಯಿಸಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ನಿತೀನ್ ರಾವ್ ಎಂಬಾತರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಬೆoಗಳೂರು, ಮಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ನಿತಿನ್ ರಾವ್ ಅಪರಾಧ ಕೃತ್ಯ ಎಸಗಿದ್ದು, ಎಲ್ಲಾ ಕಡೆ ಪೊಲೀಸರು ಹುಡುಕಾಡುತ್ತಿದ್ದರು. ಯಾವ ಪೊಲೀಸರಿಗೂ ನಿತಿನ್ ರಾವ್ ಸಿಕ್ಕಿ ಬಿದ್ದಿರಲಿಲ್ಲ. ಮಾದೇಶ, ಗುಂಡ, ಅನಿಲ ಸೇರಿ ಬಗೆ ಬಗೆಯ ಹೆಸರಿನಲ್ಲಿ ನಿತಿನ್ ರಾವ್ ಆಧಾರ್ ಕಾರ್ಡ ಸಹ ಮಾಡಿಸಿಕೊಂಡಿದ್ದರು. ಅದೇ ಆಧಾರದಲ್ಲಿ ಪದೇ ಪದೇ ಪೊಲೀಸರಿಗೆ ಯಾಮಾರಿಸಿ ಪರಾರಿಯಾಗುತ್ತಿದ್ದರು.
2012ರ ಮಾರ್ಚ 14ರಂದು ನ್ಯಾಯಾಲಯದಿಂದ ಜಾಮೀನುಪಡೆದು ಪರಾರಿಯಾಗಿದ್ದ ನಿತಿನ್ ರಾವ್ ಬಗ್ಗೆ ಯಾರಿಗೂ ಸುಳಿವಿರಲಿಲ್ಲ. 13 ವರ್ಷಗಳ ಕಾಲ ರಾಜ್ಯದ ನಾನಾ ಭಾಗದ ಪೊಲೀಸರು ಹುಡುಕಾಟ ನಡೆಸಿದರೂ ನಿತಿನ್ ರಾವ್ ಸಿಕ್ಕಿರಲಿಲ್ಲ. ಮಂಗಳೂರು ಮೂಲದ ನಿತಿನ್ ರಾವ್ ಶಿರಸಿಯಲ್ಲಿ ಸಹ ಅಪರಾಧ ಕೃತ್ಯವೊಂದರಲ್ಲಿ ಭಾಗಿಯಾಗಿದ್ದರು. ಕ್ರೂರ ವರ್ತನೆ, ಶಾಂತಿಭAಗ ಹಾಗೂ ಬೆದರಿಕೆ ಆರೋಪಗಳನ್ನು ಅವರು ಎದುರಿಸುತ್ತಿದ್ದರು. ಹೀಗಾಗಿ ಶಿರಸಿ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದರು.
ಮೇ 14ರ ನಸುಕಿನಲ್ಲಿ ನಿತೀನ್ ರಾವ್ ಬೆಂಗಳೂರಿನ ವಿಶ್ವೇಶ್ವರ ಲೇಔಟಿನಲ್ಲಿರುವ ಬಗ್ಗೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿತು. ಪೊಲೀಸ್ ವೃತ್ತನಿರೀಕ್ಷಕ ಶಶಿಕಾಂತ ವರ್ಮಾಮ ಪಿಎಸ್‌ಐ ರಾಜಕುಮಾರ ಉಕ್ಕಲಿ, ರತ್ನಾ ಕುರಿ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರ್ಕರ್, ರಾಮಯ್ಯ ಪೂಜಾರಿ, ದಾವಲಸಾಬ ಕುಂದಿ, ಹನುಮಂತ ಮಾಕಾಪೂರ, ಅಶೋಕ ಹರಿಕಂತ್ರ ಕಾರ್ಯಾಚರಣೆಗಿಳಿದರು. ಕಾರವಾರದ ಟೆಕ್ನಿಕಲ್ ಸೆಲ್ ವಿಭಾಗದ ಉದಯ ಗುನಗಾ ಸಹ ತಾಂತ್ರಿಕ ಸಹಕಾರ ನೀಡಿದ್ದು, ನಿತಿನ್ ರಾವ್ ಸಿಕ್ಕಿಬಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ ಎಂ, ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಸಹ ಈ ಕಾರ್ಯಾಚರಣೆಯ ಭಾಗವಾಗಿದ್ದರು.