ಮುಂಡಗೋಡದ ನಂದೀಶ್ವರ ನಗರದಲ್ಲಿ ಬುಧವಾರ ಸಂಜೆ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.
ಕಾವಲಕೊಪ್ಪ ಗ್ರಾಮದ ಮಂಜುನಾಥ ಪಾಪಣ್ಣ ಮಲವಳ್ಳಿ ಸಾವನಪ್ಪಿದ ವ್ಯಕ್ತಿ. ನಿಲ್ಲಿಸಿದ ಟ್ರ‍್ಯಾಕ್ಟರ್ ಟ್ರಾಲಿಯಲ್ಲಿ ಮುಂಭಾಗದಲ್ಲಿ ಕುಳಿತಕೊಂಡ ಸ್ಥಿತಿಯಲ್ಲಿ ಅವರ ಶವ ಕಾಣಿಸಿಕೊಂಡಿದೆ.
ಈ ಸಾವು ಸಹಜವಾಗಿ ಕಾಣುತ್ತಿಲ್ಲ. ಹೀಗಾಗಿ ಅಲ್ಲಿನವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೋಲಿಸರು ಪರಿಶೀಲನೆ ನಡೆಸಿದ್ದಾರೆ. ಕಾನೂನಿನ ಪ್ರಕಾರ ಮುಂದಿನ ಪ್ರಕ್ರಿಯೆ ನಡೆಯುತ್ತಿದೆ.







