ಯಲ್ಲಾಪುರ ಹಾಗೂ ಶಿರಸಿಯಲ್ಲಿನ ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಜೋಡಕೆರೆ ಬಳಿ ಮಾದಕ ವ್ಯಸನ ಸೇವಿಸುತ್ತಿದ್ದ ಆಕಾಶ ಪೋಳ ಎಂಬಾತರ ಮೇಲೆ ಯಲ್ಲಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಶಿರಸಿ ನಗರ ಪೊಲೀಸರು ಶಿರಸಿ ಕಸ್ತೂರಬಾ ನಗರದ ನಿಯಾಜ್ ದಾವುದ್ ಉಮರ್ ಮತ್ತು ಅರೆಕೊಪ್ಪದ ಬಾಲಚಂದ್ರ ಗುರುಮೂರ್ತಿ ಮಡಿವಾಳ ಎಂಬಾತರನ್ನು ಗಾಂಜಾ ಸೇವಿಸಿದ ಕಾರಣ ಬಂಧಿಸಿದ್ದಾರೆ.
23 ವರ್ಷದ ಆಕಾಶ ಪೋಳ ಚಾಲಕರಾಗಿದ್ದು, ಯಲ್ಲಾಪುರದ ಹೊಸಳ್ಳಿ ಊರಿನವರಾಗಿದ್ದಾರೆ. ಗಾಂಜಾ ನಶೆಯಲ್ಲಿ ತೇಲಾಡುತ್ತಿರುವಾಗಲೇ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಮೇ 14ರಂದು ನಡೆದ ವೈದ್ಯಕೀಯ ತಪಾಸಣೆಯಲ್ಲಿ ಆಕಾಶ ಪೋಳ್ ಅಪಾರ ಪ್ರಮಾಣದಲ್ಲಿ ಗಾಂಜಾ ಸೇವಿಸಿರುವುದು ದೃಢವಾಗಿದೆ.
ಯಲ್ಲಾಪುರದ ಜೋಡಕೆರೆಯಿಂದ ಮಂಜುನಾಥನಗರದ ಕಡೆ ಹೋಗುತ್ತಿದ್ದ ಆಕಾಶ ಅವರನ್ನು ಪಿಎಸ್‌ಐ ಸಿದ್ದಪ್ಪ ಗುಡಿ ಅವರು ಮಾತನಾಡಿಸಿದರು. ಗಾಂಜಾ ನಶೆಯ ಅನುಮಾನದ ಹಿನ್ನಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ನೀಡಿದ ವರದಿ ಆಧಾರದಲ್ಲಿ ಪೊಲೀಸ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
ಇನ್ನೂ ಶಿರಸಿ ಕಸ್ತೂರಬಾ ನಗರದ ನಿಯಾಜ್ ದಾವುದ್ ಉಮರ್ ಮತ್ತು ಅರೆಕೊಪ್ಪದ ಬಾಲಚಂದ್ರ ಗುರುಮೂರ್ತಿ ಮಡಿವಾಳ ಅವರು ಶಿರಸಿ ನಗರದ ಲಿಂಗದಕೋಣ ರಸ್ತೆ ಮೀನು ಮಾರುಕಟ್ಟೆ ಹಿಂದೆ ಗಾಂಜಾ ಸೇವಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಶಿರಸಿ ಪಿಎಸ್‌ಐ ನಾಗಪ್ಪ ಬಿ ಆ ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಿದರು.