6
  • Latest
Uttara Kannada The common man's act that tired the minister in charge!

ಉತ್ತರ ಕನ್ನಡ: ಉಸ್ತುವಾರಿ ಸಚಿವರನ್ನು ಸುಸ್ತು ಮಾಡಿದ ಜನಸಾಮಾನ್ಯರ ಕಾಯ್ದೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಉತ್ತರ ಕನ್ನಡ: ಉಸ್ತುವಾರಿ ಸಚಿವರನ್ನು ಸುಸ್ತು ಮಾಡಿದ ಜನಸಾಮಾನ್ಯರ ಕಾಯ್ದೆ!

AchyutKumar by AchyutKumar
May 15, 2025
in ರಾಜಕೀಯ
Uttara Kannada The common man's act that tired the minister in charge!
advt advt advt
ADVERTISEMENT

ಪಾರದರ್ಶಕ ಆಡಳಿತ ಜಾರಿಗಾಗಿ ಜನಪ್ರತಿನಿಧಿಗಳು ಜಾರಿ ಮಾಡಿದ ಮಾಹಿತಿ ಹಕ್ಕು ಕಾಯ್ದೆ ಇದೀಗ ಜನಪ್ರತಿನಿಧಿಗಳಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರನ್ನು ಈ ಕಾಯ್ದೆ ಸುತ್ತುವರೆದಿದ್ದು, ಇದರಿಂದ ಅವರು ಸುಸ್ತಾಗಿದ್ದಾರೆ!

ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಬೆನ್ನತ್ತಿದ್ದಾರೆ. ಮಂಕಾಳು ವೈದ್ಯ ಅವರ ಮುಂದಾಳತ್ವದಲ್ಲಿ ನಡೆದ ಮೀನು ಮೇಳ, ಮಂಕಾಳು ವೈದ್ಯ ಅವರ ಒಡೆತನದ ಶಾಲೆ ಹಾಗೂ ಅರಣ್ಯ ಅತಿಕ್ರಮಣ, ಆಸ್ಪತ್ರೆಯಲ್ಲಿನ ಅವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಇದರಿಂದ ಸ್ವತಃ ಮಂಕಾಳು ವೈದ್ಯರೇ ತಬ್ಬಿಬ್ಬಾಗಿದ್ದು, ಮಾಹಿತಿ ಹಕ್ಕು ಬಳಕೆದಾರರ ವಿರುದ್ಧ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಭಟ್ಕಳ ತಾಲೂಕಿನ ಬೈಲೂರಿನ ಸರ್ಕಾರಿ ಅರಣ್ಯ ಜಾಗವನ್ನು ಸಚಿವರು ಅತಿಕ್ರಮಿಸಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ದೂರಿದ್ದಾರೆ. ಬೀನಾ ವೈದ್ಯ ಶಿಕ್ಷಣ ಸಂಸ್ಥೆಗಾಗಿ ಅರಣ್ಯ ಭೂಮಿ ಒತ್ತುವರಿ ನಡೆದಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ ಅಡಿ ಪಡೆದ ದಾಖಲೆಗಳ ಜೊತೆ ಹೋರಾಟಗಾರರು ರಾಜ್ಯಪಾಲರಿಗೆ ಸಹ ದೂರು ನೀಡಿದ್ದಾರೆ. ಇದರಿಂದ ಮಂಕಾಳು ವೈದ್ಯ ಅವರು ಸಿಡಿಮಿಡಿಗೊಂಡಿದ್ದಾರೆ.

ಮoಕಾಳು ವೈದ್ಯರ ಮುಂದಾಳತ್ವದಲ್ಲಿ ನಡೆದ ಮತ್ಸ್ಯಮೇಳದ ಹಣಕಾಸು ವಿಷಯದಲ್ಲಿನ ಲೋಪವೂ ಮಾಹಿತಿ ಹಕ್ಕು ಕಾಯ್ದೆಯಿಂದ ಅನಾವರಣಗೊಂಡಿದೆ. ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೇ ಮೀನು ಮೇಳಕ್ಕಾಗಿ 9.85 ಕೋಟಿ ರೂ ವೆಚ್ಚ ಮಾಡಿರುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದರಿಂದಲೂ ಮಂಕಾಳು ವೈದ್ಯ ಅವರು ಬೇಸರಿಸಿಕೊಂಡಿದ್ದಾರೆ.

Advertisement. Scroll to continue reading.

ಇನ್ನೂ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ಬಿಪಿಎಲ್ ಕಾರ್ಡದಾರರಿಗೆ ಆದ ಅನ್ಯಾಯದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ವ್ಯಕ್ತಿಯೊಬ್ಬರು ದಾಖಲೆ ಬಯಸಿದ್ದಾರೆ. ಇದಕ್ಕಾಗಿ ಅರ್ಜಿದಾರರು ಜರಾಕ್ಸ ವೆಚ್ಚ ಎಂದು 16 ಸಾವಿರ ರೂ ಪಾವತಿಸಲು ಸಿದ್ಧರಾಗಿದ್ದಾರೆ. ಇಲ್ಲಿನ ಅನ್ಯಾಯದ ವಿಷಯ ಸಹ ಉಸ್ತುವಾರಿ ಸಚಿವರನ್ನು ಸುತ್ತುವರೆಯುವ ಸಾಧ್ಯತೆಯಿರುವುದರಿಂದ ಮಂಕಾಳು ವೈದ್ಯರ ತಲೆಬಿಸಿ ಹೆಚ್ಚಾಗಿದೆ. ಈ ಎಲ್ಲಾ ಹಿನ್ನಲೆ ಮಂಕಾಳು ವೈದ್ಯ ಅವರು `ಮಾಹತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಕೆಲವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ’ ಎಂಬ ಹೇಳಿಕೆ ನೀಡಿದ್ದಾರೆ.

`ಹಣಕಾಸು ವಿಷಯ, ವರ್ಗಾವಣೆ ಪಟ್ಟಿ, ಟೆಂಡರ್ ಮಾಹಿತಿ ಸೇರಿ ಎಲ್ಲಾ ದಾಖಲೆಗಳನ್ನು ಸರ್ಕಾರ ತನ್ನ ವೆಬ್‌ಸೈಟಿನಲ್ಲಿ ಪಾರದರ್ಶಕವಾಗಿ ಪ್ರದರ್ಶಿಸಿದರೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವ ಅಗತ್ಯವೇ ಬರುವುದಿಲ್ಲ. ದಾಖಲೆಗಳನ್ನು ಬಚ್ಚಿಡಲು ಪ್ರಯತ್ನಿಸಿದಾಗ ಮಾತ್ರ ಅರ್ಜಿದಾರರು ದಾಖಲೆಗಳಿಗಾಗಿ ಅಲೆದಾಡಬೇಕಾಗುತ್ತದೆ’ ಎಂಬುದು ಮಾಹಿತಿ ಹಕ್ಕು ಬಳಕೆದಾರರ ಅಭಿಪ್ರಾಯ.

ShareSendTweetShare
ADVERTISEMENT
Previous Post

ಒಂದು ಸಾವು.. ಹಲವು ಅನುಮಾನ!

Next Post

ಗ್ಯಾರಂಟಿ ಬದುಕು: ಕಣ್ಮನ ಸೆಳೆದ ಸರ್ಕಾರಿ ಜಾಹೀರಾತು!

Next Post
Guaranteed life: Eye-catching government advertisement!

ಗ್ಯಾರಂಟಿ ಬದುಕು: ಕಣ್ಮನ ಸೆಳೆದ ಸರ್ಕಾರಿ ಜಾಹೀರಾತು!

Sirsi-Yellapur Strict action against those caught with ganja!

ಶಿರಸಿ-ಯಲ್ಲಾಪುರ: ಗಾಂಜಾ ಗುಂಗಿನಲ್ಲಿದ್ದವರ ವಿರುದ್ಧ ಕಠಿಣ ಕ್ರಮ!

That snake was 13 feet long!

13 ಅಡಿ ಉದ್ದವಿತ್ತು ಆ ಹಾವು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.