6
  • Latest
A woman who came to Karwar stole a car and fled!

ಅನಂತನ ಅವಾಂತರ: ಕಾರವಾರಕ್ಕೆ ಬಂದ ನಾರಿ: ಕಾರು ಕದ್ದು ಪರಾರಿ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅನಂತನ ಅವಾಂತರ: ಕಾರವಾರಕ್ಕೆ ಬಂದ ನಾರಿ: ಕಾರು ಕದ್ದು ಪರಾರಿ!

AchyutKumar by AchyutKumar
in ರಾಜ್ಯ
A woman who came to Karwar stole a car and fled!

ಬೆಂಗಳೂರಿನಲ್ಲಿ ದುಡಿಯುತ್ತಿರುವ ಕಾರವಾರದ ಕಾರು ಚಾಲಕ ಅನಂತ ಎಂಬಾತರು ಮಹಿಳೆಯೊಬ್ಬರ ಮೋಹಕ್ಕೆ ಬಿದ್ದು ತಮ್ಮ ಕಾರು ಕಳೆದುಕೊಂಡಿದ್ದಾರೆ. ಬಾಡಿಗೆ ಕಾರಿನ ಮೂಲಕ ಕಾರವಾರಕ್ಕೆ ಬಂದ ನಾರಿ ಅನಂತರ ಸ್ನೇಹ ಬೆಳೆಸಿ ಕಾರು ಬಾಡಿಗೆ ಪಡೆದು ಪರಾರಿಯಾಗಿದ್ದು, ಬೆಂಗಳೂರು ಪೊಲೀಸರು ಇದೀಗ ಆ ನಾರಿಯ ಹುಡುಕಾಟ ಶುರು ಮಾಡಿದ್ದಾರೆ.

ಕಳೆದ ತಿಂಗಳು ಮಹಿಳೆಯೊಬ್ಬರು ಕಾರವಾರಕ್ಕೆ ಕಾರು ಬುಕ್ ಮಾಡಿದ್ದರು. ಊರಿಗೆ ಬರುವ ಖುಷಿಯಲ್ಲಿದ್ದ ಅನಂತ ಅವರು ಆ ಮಹಿಳೆಗಾಗಿ ಕಾರು ಓಡಿಸಿಕೊಂಡು ಬಂದಿದ್ದರು. ಆ ಕಾರು ಇಬ್ಬರ ನಡುವಿನ ಸ್ನೇಹ ಸಂಭಾಷಣೆಗೆ ಸಾಕ್ಷಿಯಾಗಿತ್ತು. ಆ ನಂತರ ಇಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊoಡಿದ್ದರು. ವಾಟ್ಸಪ್ ಕಾಲ್ ಮೂಲಕ ಆ ಮಹಿಳೆ ಅನಂತ ಅವರನ್ನು ಆಗಾಗ ಮಾತನಾಡಿಸುತ್ತಿದ್ದರು.

ಇದಾದ ನಂತರ `ತಾನು ಬೆಂಗಳೂರಿನಿoದ ಮೈಸೂರು ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಇದಕ್ಕಾಗಿ ಕಾರು ಬೇಕು’ ಎಂದು ಆ ಮಹಿಳೆ ಅನಂತರಿಗೆ ಫೋನ್ ಮಾಡಿದ್ದರು. ಮೇ 6ರಂದು ರಾತ್ರಿ 9.30ಕ್ಕೆ ಕಾರು ಬೇಕು ಎಂದಿದ್ದ ಕಾರಣ ಅನಂತ ಅವರು ಸಮಯಕ್ಕೆ ಸರಿಯಾಗಿ ಕಾರು ನೀಡುವ ಉತ್ಸಾಹದಲ್ಲಿದ್ದರು. ಹೀಗಾಗಿ ಹಿಂದಿನ ದಿನ ಹುಬ್ಬಳ್ಳಿಯಲ್ಲಿದ್ದ ಅವರು ವೇಗವಾಗಿ ಕಾರು ಓಡಿಸಿಕೊಂಡು ಬಂದಿದ್ದರು. ಕಾರನ್ನು ಮಹಿಳೆಗೆ ನೀಡುವ ಮುನ್ನ ಬಾಡಿಗೆಯ ಬಗ್ಗೆಯೂ ಮಾತನಾಡಿದ್ದರು.

ಅದಾದ ನಂತರ ಮೆಜೆಸ್ಟಿಕ್ ಬಳಿ ರೂಂ ಬುಕ್ ಮಾಡುವಂತೆ ಆ ಮಹಿಳೆ ಅನಂತರ ಬಳಿ ಕೇಳಿಕೊಂಡಿದ್ದರು. ಆ ಮಹಿಳೆ ಹೇಳಿದಂತೆ ಅನಂತ್ ಅವರು ತುಮಕೂರು ರಸ್ತೆಯ ಬಳಿ ರೂಂ ಮಾಡಿದ್ದರು. ಅನಂತ ಅವರು 8ಕೀಮಿ ದೂರದಿಂದ ಆ ಮಹಿಳೆಯನ್ನು ರೂಮಿಗೆ ಕರೆದೊಯ್ದಿದ್ದರು. ಅನಂತಕುಮಾರ ಅವರನ್ನು ರೂಮಿಗೆ ಆಹ್ವಾನಿಸಿದ ಮಹಿಳೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದು, ಅನಂತ ಅವರು ಶೌಚಾಲಯಕ್ಕೆ ತೆರಳಿದಾಗ ಅವರ ಮೊಬೈಲ್ ಕದ್ದು ಕಾರಿನ ಜೊತೆ ಪರಾರಿಯಾದರು.

ಅನಂತ ಅವರು ಬಾತ್ ರೂಮಿನಿಂದ ಬೊಬ್ಬೆ ಹೊಡೆದಿರುವುದನ್ನು ಕೇಳಿ ಹೊಟೇಲ್ ಸಿಬ್ಬಂದಿ ಬಾಗಿಲು ತೆರೆದರು. ಅಷ್ಟರೊಳಗೆ ಆ ನಾರಿ ಇನ್ನೊಬ್ಬ ಪುರುಷನ ಜೊತೆ ಸೇರಿ ಕಾರು ಕದ್ದು ಬಹುದೂರ ಸಾಗಿದ್ದರು. ರೂಮು ಪಡೆಯುವ ಮುನ್ನ ಆ ಮಹಿಳೆ ತನ್ನ ಆಧಾರ್ ಕಾರ್ಡ ನೀಡಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಹೊಟೇಲಿನ ಕ್ಯಾಮರಾಗಳು ಬಂದ್ ಆಗಿದ್ದರಿಂದ ಕಳ್ಳರ ಪತ್ತೆ ಸಾಧ್ಯವಾಗಿಲ್ಲ. ಸದ್ಯ ಚಿತ್ರದುರ್ಗದವರೆಗೆ ಕಾರು ಹೋದ ಸುಳಿವು ಸಿಕ್ಕಿದೆ. ಪೊಲೀಸರು ಅನಂತ ಹೇಳಿದ ಕಥೆಯ ಬಗ್ಗೆಯೂ ಅನುಮಾನವ್ಯಕ್ತಪಡಿಸಿದ್ದು, ಇನ್ನೊಂದು ದಿಕ್ಕಿನಲ್ಲಿ ಅನಂತ ಅವರ ವಿಚಾರಣೆಯೂ ಮುಂದುವರೆದಿದೆ.

ShareSendTweetShare
Previous Post

ಪಾಪಿದೇಶಕ್ಕೆ ಬುದ್ದಿ ಕಲಿಸಿದ ರೈತ: ಶತ್ರು ಸೈನ್ಯಕ್ಕೆ ಇದೀಗ ಕವಳಕ್ಕೂ ಗತಿಯಿಲ್ಲ!

Next Post

ದುಡಿಯುವ ವಯಸ್ಸಿನಲ್ಲಿ ಅಡ್ಡದಾರಿ: ಮಾದಕ ವ್ಯಸನ ಮಾರಾಟಗಾರರ ಸೆರೆ!

Next Post
Working age debauchery Drug dealers arrested!

ದುಡಿಯುವ ವಯಸ್ಸಿನಲ್ಲಿ ಅಡ್ಡದಾರಿ: ಮಾದಕ ವ್ಯಸನ ಮಾರಾಟಗಾರರ ಸೆರೆ!

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ರಂಗಿನಕಟ್ಟಾ ಬಳಿ ರಕ್ತದ ರಂಗೋಲಿ: ಅಪರಿಚಿತ ಆಟೋ ಬಡಿದು ವೃದ್ಧ ಸಾವು!

Gokarna security tightened

ಗೋಕರ್ಣ ಭದ್ರತೆ ಇನ್ನಷ್ಟು ಬಲಿಷ್ಠ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.