ಭಟ್ಕಳದ ರಂಗಿನಕಟ್ಟಾ ಬಳಿಯಿರುವ ಫೋರ್ ಸಿಸನ್ ರೆಸ್ಟೋರೆಂಟ್ ಬಳಿ ರಿಕ್ಷಾವೊಂದು ವೃದ್ಧರಿಗೆ ಡಿಕ್ಕಿಯಾಗಿದೆ. ಪರಿಣಾಮ ಆ ವೃದ್ಧರು ರಕ್ತದ ಮಡುವಿನಲ್ಲಿ ಹೊರಳಾಡಿ ಸಾವನಪ್ಪಿದ್ದಾರೆ.
ಮೇ 12ರಂದು ಗುಡ್‌ಲಕ್ ರಸ್ತೆಯ ಅಬ್ದುಲ್ ಮತಿನ್ ಕಾಸೀಂಜಿ (72) ಅವರು ಹೆದ್ದಾರಿ ಅಂಚಿನಲ್ಲಿ ನಿಂತಿದ್ದರು. ತೆಂಗಿನಗುoಡಿ ತಿರುವಿನಿಂದ ಸಂಶುದ್ಧೀನ್ ರಸ್ತೆ ಕಡೆ ಹೊರಟ ರಿಕ್ಷಾ ಅವರಿಗೆ ಗುದ್ದಿ ಪರಾರಿಯಾಯಿತು. ಆ ರಿಕ್ಷಾ ಯಾವುದು? ಚಾಲಕ ಯಾರು? ಎಂದು ಯಾರಿಗೂ ಗೊತ್ತಾಗಲಿಲ್ಲ.
ರಿಕ್ಷಾ ಗುದ್ದಿದ ರಭಸಕ್ಕೆ ಅಬ್ದುಲ್ ಮತಿನ್ ಕಾಸೀಂಜಿ ನೆಲಕ್ಕೆ ಬಿದ್ದರು. ಅಲ್ಲಿಯೇ ಅವರು ರಕ್ತದಲ್ಲಿ ಹೊರಳಾಟ ನಡೆಸಿದರು. ಇದನ್ನು ನೋಡಿದ ಜನ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಅದೇ ದಿನ ರಾತ್ರಿ ಅಬ್ದುಲ್ ಮತಿನ್ ಕಾಸೀಂಜಿ ಸಾವನಪ್ಪಿದರು. ಮಾವನ ಸಾವಿಗೆ ಕಾರಣನಾದ ಅಪರಿಚಿತ ರಿಕ್ಷಾ ಚಾಲಕನ ವಿರುದ್ಧ ಕಾರಕದ್ದೆಯ ಜಹೀರ್ ಅಹ್ಮದ್ ಪೊಲೀಸ್ ದೂರು ನೀಡಿದರು. ಭಟ್ಕಳ ಶಹರ ಠಾಣೆ ಪೊಲೀಸರು ಇದೀಗ ಅಪಘಾತಕ್ಕೆ ಕಾರಣವಾದ ರಿಕ್ಷಾ ಹುಡುಕಾಟ ನಡೆಸಿದ್ದಾರೆ.





