6
  • Latest
Sirsi Insult to the Municipal Council President Firestorm against AC!

ಶಿರಸಿ | ನಗರಸಭೆ ಅಧ್ಯಕ್ಷರಿಗೆ ಅವಮಾನ: ಎಸಿ ವಿರುದ್ಧ ಬೆಂಕಿ ಬಿರುಗಾಳಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿರಸಿ | ನಗರಸಭೆ ಅಧ್ಯಕ್ಷರಿಗೆ ಅವಮಾನ: ಎಸಿ ವಿರುದ್ಧ ಬೆಂಕಿ ಬಿರುಗಾಳಿ!

AchyutKumar by AchyutKumar
in ರಾಜ್ಯ
Sirsi Insult to the Municipal Council President Firestorm against AC!

ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಶಿರಸಿಗೆ ಬಂದಾಗ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರು ಉಪರಾಷ್ಟ್ರಪತಿಗಳನ್ನು ಸ್ವಾಗತಿಸಬೇಕಿತ್ತು. ಆದರೆ, ಜಿಲ್ಲಾಡಳಿತ ಇದಕ್ಕೆ ಅವಕಾಶವನ್ನೇ ಕೊಡಲಿಲ್ಲ!

ADVERTISEMENT

ಉಪರಾಷ್ಟ್ರಪತಿ  ಜಗದೀಪ ಧನಕರ್ ಅವರು ಶಿರಸಿಗೆ ಬಂದಾಗ ಉತ್ತರ ಕನ್ನಡ ಜಿಲ್ಲಾಡಳಿತ ಮೊದಲು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರಿಗೆ `ಗಣ್ಯರ ಸ್ವಾಗತ’ದ ಜವಾಬ್ದಾರಿ ನೀಡಿತ್ತು. ಅದಾದ ನಂತರ ನಗರಸಭೆ ಅಧ್ಯಕ್ಷರಿಗೆ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ಫೋನ್ ಮಾಡಿ `ನೀವು ಅಲ್ಲಿ ಬಂದರೆ ಸರಿಯಾಗುವುದಿಲ್ಲ. ಹೀಗಾಗಿ ನೀವು ಬರುವುದು ಬೇಡ’ ಎಂದಿದ್ದರು!

ಉತ್ತರ ಕನ್ನಡ ಜಿಲ್ಲಾಡಳಿತ ಶಿರಸಿ ನಗರಸಭೆಗೆ ಅವಮಾನ ಮಾಡಿರುವುದು ಇದೇ ಮೊದಲಲ್ಲ. ಕದಂಬ ಉತ್ಸವದ ಅವಧಿಯಲ್ಲಿ ಸಹ ಜಿಲ್ಲಾಡಳಿತ ನಗರಸಭೆ ಸದಸ್ಯರಿಂದ ಅಂತರ ಕಾದುಕೊಂಡಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಸಹ ನಗರಸಭೆ ಸಹಕಾರದ ಬಗ್ಗೆ ನಮೂದಿಸಿರಲಿಲ್ಲ. ಕದಂಬ ಉತ್ಸವಕ್ಕೂ ನಗರಸಭೆಯವರನ್ನು ಆಮಂತ್ರಿಸಿರಲಿಲ್ಲ. ಆ ವೇಳೆ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದರೂ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಅಧಿಕಾರಿಗಳು ಸಹ ಜನಪ್ರತಿನಿಧಿಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಲಿಲ್ಲ.

Advertisement. Scroll to continue reading.

ಸರ್ಕಾರಿ ಕಾರ್ಯಕ್ರಮಗಳಿಗೆ ಆಮಂತ್ರಿಸದೇ ಇರುವುದು, ಶಿಷ್ಟಾಚಾರ ಪಾಲನೆಯಲ್ಲಿನ ಲೋಪ, ಜನಪ್ರತಿನಿಧಿಗಳ ಫೋನ್ ಕರೆ ಸ್ವೀಕರಿಸದಿರುವುದು ಸೇರಿ ಹಲವು ಬಗೆಯ ಆರೋಪಗಳು ಮೊದಲಿನಿಂದಲೂ ಇದೆ. ಇದೀಗ ನಗರದ ಪ್ರಥಮ ಪ್ರಜೆ ಎಂದು ಬಣ್ಣಿಸಲ್ಪಡುವ ನಗರಸಭೆ ಅಧ್ಯಕ್ಷರಿಗೆ ಅಧಿಕಾರಿಗಳು ಅವಮಾನ ಮಾಡಿದ ಬಗ್ಗೆ ನಗರಸಭೆ ಸದಸ್ಯರು ಕಿಡಿಕಾರಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ಶಿರಸಿ ನಗರಸಭೆ ಅಧ್ಯಕ್ಷರಿಗೆ ಅವಮಾನ ಮಾಡಿರುವ ಬಗ್ಗೆ ಚರ್ಚೆ ನಡೆದಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿಯೇ ಸದಸ್ಯರು ಉಪವಿಭಾಗಾಧಿಕಾರಿ ಕಾವ್ಯರಾಣಿ ವಿರುದ್ಧ ಸಿಡಿದೆದ್ದಿದ್ದಾರೆ.

Advertisement. Scroll to continue reading.

ನಗರಸಭೆಗೆ ಆದ ಅವಮಾನದ ಬಗ್ಗೆ ನಗರಸಭೆ ಸದಸ್ಯ ಶ್ರೀಕಾಂತ ತಾರಿಬಾಗಿಲು ಆಕ್ಷೇಪಿಸಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಯಾಗಿ ನಗರಸಭೆ ಅಧ್ಯಕ್ಷ ಶರ್ಮಿಳಾ ಮಾದನಗೇರಿ ಅವರು `ಆ ದಿನ’ ನಡೆದ ಘಟನಾವಳಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. `ನಮಗೆ ಅವಕಾಶ ಕೊಡಿ ಎಂದು ಯಾರೂ ಕೇಳಿರಲಿಲ್ಲ. ಉಪವಿಭಾಗಾಧಿಕಾರಿ ಕಚೇರಿಯಿಂದಲೇ ಸ್ವಾಗತದ ಜವಾಬ್ದಾರಿ ನೀಡಿ, ನಂತರ ಕಸಿದುಕೊಳ್ಳಲಾಗಿದೆ. ನಿಮಗೆ ತಪ್ಪಾಗಿ ಆಮಂತ್ರಣ ನೀಡಲಾಗಿದೆ. ನೀವು ಅಲ್ಲಿ ಬರುವುದು ಬೇಡ’ ಎಂದು ಉಪವಿಭಾಗಾಧಿಕಾರಿಗಳು ಫೋನ್ ಮಾಡಿ ಹೇಳಿದ್ದರು’ ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರು ಸದಸ್ಯರ ಮುಂದೆ ನೋವು ತೋಡಿಕೊಂಡಿದ್ದಾರೆ.

`ಜನಪ್ರತಿನಿಧಿಗಳಿಗೆ ಗೌರವ ನೀಡುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಆದರೂ, ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರ ಜಿಲ್ಲೆಯಲ್ಲಿಯೇ ಜನಪ್ರತಿನಿಧಿಗಳಿಗೆ ಪದೇ ಪದೇ ಅವಮಾನವಾಗುತ್ತಿರುವುದು ಬೇಸರದ ಸಂಗತಿ’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು. ಉಪವಿಭಾಗಾಧಿಕಾರಿಯಿಂದ ಆದ ಲೋಪದ ಬಗ್ಗೆ ಸಂಸದರು ಹಾಗೂ ಶಾಸಕರ ಗಮನಕ್ಕೆ ತರಲು ನಗರಸಭೆಯವರು ನಿರ್ಧರಿಸಿದರು.

Previous Post

ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಸಯ್ಯದ: ಪ ಪಂ ಸದಸ್ಯನ ಸಾಧನೆಗೆ ಸಿಕ್ಕ ಸನ್ಮಾನ!

Next Post

ಕಾಡಿನ ಮಕ್ಕಳಿಗೆ ಭೂಮಿ ಸಮಸ್ಯೆ: ಮುಖ್ಯಮಂತ್ರಿ ಮೊರೆಹೋದ ಮಾಜಿ ಸಚಿವ!

Next Post
Land issue for forest children Former minister appeals to Chief Minister!

ಕಾಡಿನ ಮಕ್ಕಳಿಗೆ ಭೂಮಿ ಸಮಸ್ಯೆ: ಮುಖ್ಯಮಂತ್ರಿ ಮೊರೆಹೋದ ಮಾಜಿ ಸಚಿವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ