ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲಿಸಿದ ದಾಂಡೇಲಿಯ ದುಲೆಸಾಹೇಬ ಮುನಿರಸಾಬ ಸವಣೂರ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ದುಲೆಸಾಹೇಬ `ಹಮ್ ಸಾಥ್ ಸಾಥ್ ಹೈ’ ಎಂಬ ವಾಟ್ಸಪ್ ಗುಂಪಿನಲ್ಲಿ ನಿಂದನಾರ್ಹ ಸಂಗತಿ ಪೊಸ್ಟ್ ಮಾಡಿದ ಕಾರಣ ಕಾನೂನು ಕ್ರಮವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಎದುರು ಮಂಡಿಯೂರಿ ಕುಳಿತು ಕೈ ಮುಗಿದ ಚಿತ್ರವನ್ನು ಶೇರ್ ಮಾಡಿದ್ದ ದುಲೆಸಾಹೇಬ ಪಾಕಿಸ್ತಾನದ ಧ್ವಜಗಳನ್ನು ವಾಟ್ಸಪ್ ಮೂಲಕ ಹಾರಿಸಿದ ಆರೋಪವಿದೆ.
ಇದರೊಂದಿಗೆ ಸಾಲಾಗಿ ನಿಂತಿರುವ ಜನ ನರೇಂದ್ರ ಮೋದಿಯವರ ಮೇಲೆ ಶೂ ಎಸೆಯುವುದು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಗ್ಗದಿಂದ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಚಿತ್ರಿಸಿ ಹರಿಬಿಟ್ಟ ಕಾರಣ ಪೊಲೀಸರು ದುಲೆಸಾಹೇಬ’ರನ್ನು ಬಂಧಿಸಿದ್ದಾರೆ.
ದುಲೆಸಾಹೇಬ ಮಾಡಿದ ಮೆಸೆಜಿನಿಂದ ಧರ್ಮಗಳ ನಡುವೆ ದ್ವೇಷ ಭಾವನೆ ಹೆಚ್ಚಾಗುವ ಸಾಧ್ಯತೆಯಿದೆ. ಆ ಸಂದೇಶಗಳು ಮತೀಯ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿದ್ದು, ಸಾರ್ವಜನಿಕರ ಶಾಂತಿ ಕದಡಲು ಪ್ರಯತ್ನಿಸಿದ ಕಾರಣ ಪ್ರಕರಣ ದಾಖಲಾಗಿದೆ.