6

ಬೇಡರ ವೇಷ ನೋಡಲು ಬಂದವರ ಮೇಲೆ ದಾಳಿ: ಹೋಳಿ ಹೊಡೆದಾಟದ ಆರೋಪಿಗೆ ಶಿಕ್ಷೆ!

ಹೋಳಿ ಹಬ್ಬದ ವೇಳೆ ನಡೆಯುವ ಬೇಡರ ವೇಷ ನೋಡಲು ಶಿರಸಿಗೆ ಬಂದಿದ್ದ ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರೀತಂ ಡಿಸೋಜಾ ಹಾಗೂ ಲಾರೇಲ್ ನೋರೋನಾ ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2015ರ ಮಾರ್ಚ 5ರಂದು ಸಿಪಿ ಬಜಾರ್ ರಸ್ತೆಯ ಮಸೀದಿ ಬಳಿ ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಬೇಡರ ವೇಷ ನೋಡುತ್ತಿದ್ದರು. ಆಗ, ಶಿರಸಿ ದುಂಡುಸಿ ನಗರದ ಪ್ರೀತಂ ಡಿಸೋಜಾ ಹಾಗೂ ಮುಸ್ಲಿಂ ಗಲ್ಲಿಯ ಲಾರೇಲ್ ನೋರೋನಾ ಅಲ್ಲಿಗೆ ಬಂದು ರಂಪಾಟ ನಡೆಸಿದ್ದರು. ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಮೇಲೆ ಪ್ರೀತಂ ಹಾಗೂ ಲಾರೇಲ್ ದಾಳಿ ಮಾಡಿದ್ದರು. ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದರು.

ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವೂ 12 ಸಾಕ್ಷಿಗಳ ವಿಚಾರಣೆ ನಡೆಸಿತು. ಕೊನೆಗೆ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಅವರು ಆರೋಪಿತರಿಗೆ 4.6ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದರು. ಜೊತೆಗೆ 13 ಸಾವಿರ ರೂ ದಂಡ ಹಾಗೂ ಗಾಯಾಳು ವಿವೇಕ್ ಹೆಗಡೆ ಅವರಿಗೆ 20 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದರು. ಪಿಎಸ್‌ಐ ನಾಗಪ್ಪ ಬಿ ಅವರ ಜೊತೆ ಪೊಲೀಸ್ ಸಿಬ್ಬಂದಿ ತುಕರಾಮ ಬಣಕಾರ ಹಾಗು ವಿಶ್ವನಾಥ ಬಂಡಾರಿ ಪ್ರಕರಣದಲ್ಲಿ ಸಾಕಷ್ಟು ಮುತುವರ್ಜಿವಹಿಸಿದ್ದರು. ಸಹಾಯಕ ಅಭಿಯೋಜಕರಾದ ಚೇತನಾ ಜಿ ಎಸ್ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

  • Related Posts

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ…

    ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್‌ನ್ಯೂಸ್..!

    ದೀಕ್ಷಾ ಭೂಮಿ ಯಾತ್ರೆಗೆ ಡಾ.ಬಿ.ಆರ್.ಅಂಬೇಡ್ಕರ ಅನುಯಾಯಿಗಳ ಆಯ್ಕೆಗೆ ಅರ್ಜಿ ಆಹ್ವಾನ ಹಾವೇರಿ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2026-27ನೇ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 21 ರಂದು ಜರುಗುವ ಪ್ರವರ್ತನಾ ದಿನಕ್ಕೆ(ವಿಜಯದಶಮಿ ದಿನದಂದು) ದಿಕ್ಷಾ ಭೂಮಿಗೆ ಯಾತ್ರೆಕೈಗೊಳ್ಳಲು ಡಾ.ಬಿ.ಆರ್.ಅಂಬೇಡ್ಕರ ಅನುಯಾಯಿಗಳಿಂದ…

    You cannot copy content of this page