ನಿತ್ಯವೂ ಸರಾಯಿ ಕುಡಿಯುತ್ತಿದ್ದ ಬನವಾಸಿಯ ದಾಮೋದರ ಮೊಗೇರ್ ಮೊನ್ನೆ ಕೀಟನಾಶಕ ಕುಡಿದಿದ್ದಾರೆ. ಪರಿಣಾಮ ಅವರು ಸಾವನಪ್ಪಿದ್ದಾರೆ!
ಶಿರಸಿ ತಾಲೂಕಿನ ಬನವಾಸಿಯ ಕಲಸಳ್ಳಿ ಬಳಿಯ ಮರಗುಂಡಿಯಲ್ಲಿ ದಾಮೋದರ ಮೊಗೇರ್ ವಾಸವಾಗಿದ್ದರು. 66 ವರ್ಷದ ಅವರು ಕೂಲಿ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದರು. ದುಡಿದ ಹಣದಲ್ಲಿ ಅಲ್ಪ ಪ್ರಮಾಣವನ್ನು ತಮ್ಮ ವ್ಯಸನಕ್ಕೆ ಬಳಸುತ್ತಿದ್ದರು. ದಾಮೋದರ ಮೊಗೇರ್ ಅವರು ಸರಾಯಿ ಕುಡಿದು ಬರುವುದನ್ನು ಅವರ ಪತ್ನಿ ಗಿರಿಜಾ ಮೊಗೇರ್ ವಾಸನೆಯಿಂದಲೇ ಕಂಡು ಹಿಡಿಯುತ್ತಿದ್ದರು. ಹೀಗಿರುವಾಗ ಮೇ 15ರಂದು ಅವರ ಬಳಿ ಬೇರೆ ಬಗೆಯ ವಾಸನೆ ಬಂದಿತು.
ಬಾಯಿoದ ಬರುವ ವಾಸನೆ ಬದಲಾದ ಬಗ್ಗೆ ಗಿರಿಜಾ ಮೊಗೇರ್ ಅವರು ಪತಿಯನ್ನು ಪ್ರಶ್ನಿಸಿದ್ದರು. ಮೊದಲು ಉತ್ತರಿಸಲು ತಡವರಿಸಿದ ದಾಮೋದರ ಮೊಗೇರ್ ನಂತರ ಕೀಟನಾಶಕ ಸೇವಿಸಿರುವುದಾಗಿ ಹೇಳಿಕೊಂಡರು. ಮರುದಿನ ಬೆಳಗ್ಗೆ ವಾಂತಿ ಮಾಡಿಕೊಳ್ಳುತ್ತಿದ್ದ ದಾಮೋದರ ಮೊಗೇರ್ ಅವರನ್ನು ಪತ್ನಿ ಗಿರಿಜಾ ಅವರು ಶಿರಸಿಯ ಪಿಜಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕರೆದೊಯ್ಯುವ ಪ್ರಯತ್ನವನ್ನು ಮಾಡಿದರು.
ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆಂಬುಲೆನ್ಸ ಮೇಲಿದ್ದ ದಾಮೋದರ ಮೊಗೇರ್ ಉಸಿರಾಟ ನಿಲ್ಲಿಸಿದರು. ಅದಾಗಿಯೂ ಗಿರಿಜಾ ಮೊಗೇರ್ ಅವರನ್ನು ಮರಳಿ ಶಿರಸಿ ಆಸ್ಪತ್ರೆಗೆ ತಂದರು. ಅಲ್ಲಿನ ವೈದ್ಯರು ದಾಮೋದರ ಮೊಗೇರ್ ಅವರು ಸಾವನಪ್ಪಿರುವುದನ್ನು ಖಚಿತಪಡಿಸಿದರು.