6

ಜಾತ್ರೆ ಅವ್ಯವಹಾರ: 11 ಲಕ್ಷ ರೂ ಅವ್ಯವಹಾರದ ಪೆನ್ ಡ್ರೈವ್ ಕಣ್ಮರೆ!

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಅವಧಿಯಲ್ಲಿ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾಗಿದ್ದು, ಇದಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಸದಸ್ಯರು ದೂರಿದ್ದಾರೆ. ಪ್ರಕರಣದ ಪತ್ತೆಗೆ ಮುಖ್ಯ ಸಾಕ್ಷಿಯಾಗಿದ್ದ ಮೂರು ಪೆನ್ ಡ್ರೈವ್ ಇದೀಗ ಕಾಣೆಯಾಗಿದೆ!

ಯಲ್ಲಾಪುರದ ಜಾತ್ರೆ ಅವಧಿಯಲ್ಲಿ ವಿವಿಧ ಪ್ರದೇಶಗಳನ್ನು ಹರಾಜು ಹಾಕಲಾಗಿತ್ತು. ಹರಾಜು ಹಾಕಿದ ಸ್ಥಳದಲ್ಲಿ ವ್ಯಾಪಾರಸ್ಥರು ಅಂಗಡಿ ಹಾಕಿಕೊಂಡು ವ್ಯವಹಾರ ನಡೆಸಿದ್ದರು. ವ್ಯಾಪಾರಿಗಳು ಪಟ್ಟಣ ಪಂಚಾಯತಗೆ ನೀಡಿದ ಹಣದಲ್ಲಿ ಅಪರಾತಪರ ನಡೆದಿದ್ದು, ಅವೆಲ್ಲವೂ ಸರ್ಕಾರಿ ಖಜಾನೆ ಸೇರಿರಲಿಲ್ಲ. ಹರಾಜು ಕೂಗಿದ ಮೊತ್ತ ಹಾಗೂ ಖಜಾನೆಗೆ ಸೇರಿದ ಮೊತ್ತದ ನಡುವೆ ವ್ಯತ್ಯಾಸ ಕಂಡು ಬಂದಿದನ್ನು ಪ ಪಂ ಸದಸ್ಯರೇ ಕಂಡು ಹಿಡಿದಿದ್ದರು. ಹರಾಜು ನಡೆದ ದಿನ 17 ಸಾವಿರ ರೂ ವೆಚ್ಚ ಮಾಡಿ ಪ ಪಂ ವಿಡಿಯೋ ಚಿತ್ರಿಕರಣವನ್ನು ನಡೆಸಿದ್ದು, ಸ್ಟೂಡಿಯೋದವರು ಮೂರು ಪೆನ್ ಡ್ರೈವ್ ಮೂಲಕ ಆ ವಿಡಿಯೋವನ್ನು ಪಟ್ಟಣ ಪಂಚಾಯತಗೆ ಹಸ್ತಾಂತರಿಸಿದ್ದರು. ಆದರೆ, ಇದೀಗ ಆ ಪೆನ್ ಡ್ರೈವ್ ಎಲ್ಲಿ ಹೋಯಿತು? ಎಂದು ಯಾರಿಗೂ ಗೊತ್ತಿಲ್ಲ!

ಶುಕ್ರವಾರ ಯಲ್ಲಾಪುರದಲ್ಲಿ ನಡೆದ ಪ ಪಂ ಸಾಮಾನ್ಯ ಸಭೆಯಲ್ಲಿ ಪೆನ್ ಡ್ರೈವ್ ವಿಷಯವಾಗಿ ಚರ್ಚೆ ನಡೆಯಿತು. `ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಅವರಿಗೆ ಆ ಪೆನ್ ಡ್ರೈವ್ ನೀಡಿದ್ದೇನೆ’ ಎಂದು ಪ ಪಂ ಸಿಬ್ಬಂದಿ ನಾಗರತ್ನ ನಾಯ್ಕ ಹೇಳಿದರು. `ನನಗೆ ಯಾವುದೇ ಪೆನ್ ಡ್ರೈವ್ ನೀಡಿಲ್ಲ’ ಎಂದು ಸೋಮೇಶ್ವರ ನಾಯ್ಕ ಸಮಜಾಯಿಶೀ ನೀಡಿದರು. `ಒಂದು ಪೆನ್ ಡ್ರೈವ್ ಸೋಮೇಶ್ವರ ನಾಯ್ಕ ಅವರಿಗೆ ನೀಡಿದರೆ, ಉಳಿದ ಎರಡು ಪೆನ್ ಡ್ರೈವ್ ಎಲ್ಲಿ?’ ಎಂದು ಉಳಿದ ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಪ ಪಂ ಸಿಬ್ಬಂದಿ ಉತ್ತರಿಸಲಿಲ್ಲ.

`ಪ ಪಂ ಸಿಬ್ಬಂದಿ ಅನಗತ್ಯ ಅಪವಾದ ಹಾಕಿದ್ದಾರೆ’ ಎಂದು ದೂರಿದ ಸೋಮೇಶ್ವರ ನಾಯ್ಕ ಅವರು `ಸರ್ಕಾರಿ ಲೆಕ್ಕಾಚಾರದ ದಾಖಲೆಯನ್ನು ಒಬ್ಬ ಸದಸ್ಯರಿಗೆ ಮಾತ್ರ ಕೊಡಲು ಸಾಧ್ಯವಿಲ್ಲ’ ಎಂದು ವಾದಿಸಿದರು. ಜೊತೆಗೆ `ತಾವು ಪೆನ್ ಡ್ರೈವ್ ಪಡೆದಿಲ್ಲ’ ಎಂದು ಸಭೆಯಲ್ಲಿ ಸಾಭೀತು ಮಾಡಿದರು. `ಜಾಗ ಹರಾಜು ಹಾಕಿದ ವೇಳೆಯಲ್ಲಿನ ವಿಡಿಯೋ ಹಾಜರುಪಡಿಸಿ’ ಎಂದು ಉಳಿದ ಸದಸ್ಯರು ಪ ಪಂ ಅಧಿಕಾರಿಗಳನ್ನು ಆಗ್ರಹಿಸಿದರು.

`ಜಾತ್ರೆಗೆ ಸಂಬoಧಿಸಿದ ಎಲ್ಲಾ ದಾಖಲೆಯನ್ನು ತನ್ನ ಗಮನಕ್ಕೆ ತನ್ನಿ’ ಎಂದು ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ತಾಕೀತು ಮಾಡಿದರು. ಈ ಹಿಂದಿನ ಸಭೆಗಳಂತೆ ಈ ಸಭೆ ಸಹ ಜಾತ್ರೆ ಲೆಕ್ಕಾಚಾರದ ಗಲಾಟೆ ಹಾಗೂ ಮೀನು ಮಾರುಕಟ್ಟೆ ವಿಷಯದೊಂದಿಗೆ ಮುಕ್ತಾಯವಾಯಿತು. ಹಿಂದಿನ ಸಭೆಯ ಠರಾವುಗಳಲ್ಲಿ ಸದಸ್ಯರ ಮಾತುಗಳನ್ನು ತಿರುಚಿ ಬರೆದ ಬಗ್ಗೆಯೂ ಕೆಲವರು ಆಕ್ಷೇಪಿಸಿದರು.

  • Related Posts

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ…

    ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್‌ನ್ಯೂಸ್..!

    ದೀಕ್ಷಾ ಭೂಮಿ ಯಾತ್ರೆಗೆ ಡಾ.ಬಿ.ಆರ್.ಅಂಬೇಡ್ಕರ ಅನುಯಾಯಿಗಳ ಆಯ್ಕೆಗೆ ಅರ್ಜಿ ಆಹ್ವಾನ ಹಾವೇರಿ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2026-27ನೇ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 21 ರಂದು ಜರುಗುವ ಪ್ರವರ್ತನಾ ದಿನಕ್ಕೆ(ವಿಜಯದಶಮಿ ದಿನದಂದು) ದಿಕ್ಷಾ ಭೂಮಿಗೆ ಯಾತ್ರೆಕೈಗೊಳ್ಳಲು ಡಾ.ಬಿ.ಆರ್.ಅಂಬೇಡ್ಕರ ಅನುಯಾಯಿಗಳಿಂದ…

    You cannot copy content of this page