ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಅವರು ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ಮತ್ತೆ ಸಕ್ರೀಯ ರಾಜಕಾರಣ ಆಗಮಿಸುವಂತೆ ಆಮಂತ್ರಿಸಿದ್ದಾರೆ.
ಅನoತಕುಮಾರ ಹೆಗಡೆ ಅವರ ಜೊತೆ ಪ್ರತಾಪ ಸಿಂಹ ಅವರು ಕಳೆದ ಲೋಕಸಭಾ ಚುನಾವಣೆ ಅವಧಿಯಲ್ಲಿ ಬಿಜೆಪಿಯ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಅವರ ಗೆಲುವು ಖಚಿತ ಎಂಬ ಅರಿವಿದ್ದರೂ ಬಿಜೆಪಿ ಆ ಇಬ್ಬರಿಗೂ ಬಿ ಪಾರಂ ನೀಡಿರಲಿಲ್ಲ. ಹೀಗಾಗಿ ಅನಂತಕುಮಾರ ಹೆಗಡೆ ಅವರ ಜೊತೆ ಪ್ರತಾಪ ಸಿಂಹ ಸಹ ಬೇಸರದಲ್ಲಿದ್ದರು. ಆದರೆ, ಪ್ರತಾಪ ಸಿಂಹ ಅದನ್ನು ಎಲ್ಲಿಯೂ ತೋರಿಸಿಕೊಂಡಿರಲಿಲ್ಲ. ಅನಂತಕುಮಾರ ಹೆಗಡೆ ಅವರು ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದರು.
ಈ ನಡುವೆ ಪ್ರತಾಪ ಸಿಂಹ ಅವರು ಕೆಲ ತಿಂಗಳ ಹಿಂದೆ ಶಿರಸಿಗೆ ಬಂದಿದ್ದರು. ಆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದ್ದರು. ಪ್ರತಾಪ ಸಿಂಹ ಅವರು ಮದುವೆ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರೂ, ಆ ವೇಳೆಯಲ್ಲಿಯೇ ಅವರು ಅನಂತಕುಮಾರ ಹೆಗಡೆ ಅವರೊಡನೆ ಸಂಪರ್ಕದಲ್ಲಿದ್ದರು. ಆಗ ಈ ಇಬ್ಬರು ರಾಜಕೀಯ ವಿಚಾರವಾಗಿ ಮಾತನಾಡಿದ ಬಗ್ಗೆ ಮಾಹಿತಿಯಿದ್ದರೂ ಅಧಿಕೃತ ಪುರಾವೆಗಳಿರಲಿಲ್ಲ.
ಸದ್ಯ, ಫೇಸ್ಬುಕ್ ಮೂಲಕ ಪ್ರತಾಪ ಸಿಂಹ ಅವರು ಅನಂತಕುಮಾರ ಹೆಗಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇದರ ಜೊತೆ `ಮತ್ತೆ ಸಕ್ರೀಯ ರಾಜಕಾರಣಕ್ಕೆ ಬನ್ನಿ’ ಎಂಬ ಆಮಂತ್ರಣ ನೀಡಿದ್ದಾರೆ. ಈ ವೇಳೆ ಅನಂತಕುಮಾರ ಹೆಗಡೆ ಅವರಿಗೆ ಹುಟ್ಟು ಹಬ್ಬದ ಸುರಿಮಳೆಯಾಗಿದೆ. ಜೊತೆಗೆ ಅನಂತಕುಮಾರ ಹೆಗಡೆ, ಪ್ರತಾಪ ಸಿಂಹ, ಬಸವನಗೌಡ ಪಾಟೀಲ ಯತ್ನಾಳ, ಈಶ್ವರಪ್ಪ ಮೊದಲಾದವರನ್ನು ಬಿಜೆಪಿ ದೂರವಿಟ್ಟಿರುವುದಕ್ಕೆ ಕಮೆಂಟ್ ಬಾಕ್ಸಿನಲ್ಲಿ ಹಲವರು ಬೇಸರವ್ಯಕ್ತಪಡಿಸಿದ್ದಾರೆ.