ಮುಂಡಗೋಡಿನಲ್ಲಿ ಹೊಟೇಲ್ ನಡೆಸುವ ಪ್ರಕಾಶ ಚಿಗಳ್ಳಿ ಅವರ ಪುತ್ರ ಮಂಜುನಾಥ ಚಿಗಳ್ಳಿ ನೇಣಿಗೆ ಶರಣಾಗಿದ್ದಾರೆ.
ಮುಂಡಗೋಡು ಪಟ್ಟಣದ ಶಿರಸಿ ರಸ್ತೆಯ ಪೆಟ್ರೊಲ್ ಬಂಕಿನ ಬಳಿ ಪ್ರಕಾಶ ಚಿಗಳ್ಳಿ ಅವರು ಹೊಟೇಲ್ ನಡೆಸುತ್ತಾರೆ. ಅದೇ ಹೊಟೇಲಿನಲ್ಲಿ ಮೇ 19ರಂದು 17 ವರ್ಷದ ಮಂಜುನಾಥ ಚಿಗಳ್ಳಿ ಸಾವನಪ್ಪಿದ್ದಾರೆ. ಪ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ಹೃದಯ ರೋಗ: ಆಸ್ಪತ್ರೆ ಸೇರಿದ ಮಹಿಳೆ ಇನ್ನಿಲ್ಲ
ಹೃದಯ ರೋಗದಿಂದ ಬಳಲುತ್ತಿದ್ದ ಅಂಕೋಲಾ ಹಿಲ್ಲೂರಿನ ಲಲಿತಾ ನಾಯ್ಕ ಅವರು ಕುಮಟಾ ಆಸ್ಪತ್ರೆಯಲ್ಲಿ ಕೊನೆಉಸಿರೆಳೆದಿದ್ದಾರೆ.
ಅಂಕೋಲಾ ಹಿಲ್ಲೂರು ಬಳಿಯ ತಿಂಗಳಬೈಲಿನ ಲಲತಾ ನಾಯ್ಕ (65) ಅವರು ಹೃದಯ ರೋಗಕ್ಕೆ ಒಳಗಾಗಿದ್ದರು. ಮೇ 18ರಂದು ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಹೀಗಾಗಿ ಅವರ ಪತಿ ಪುರುಷೋತ್ತಮ ನಾಯ್ಕ ಅವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಮರುದಿನ ಅಲ್ಲಿನ ವೈದ್ಯರು ಲಲಿತಾ ನಾಯ್ಕ ಅವರ ಸಾವಿನ ಘೋಷಣೆ ಮಾಡಿದರು.