ಯಲ್ಲಾಪುರ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ 108 ಆಂಬುಲೆನ್ಸಿಗೆ ಕಾಡು ಪ್ರಾಣಿ ಅಡ್ಡಗಟ್ಟಿದೆ. ಪರಿಣಾಮ ಆಂಬುಲೆನ್ಸ್ ಅಪಘಾತಕ್ಕೀಡಾಗಿದೆ.
ಯಲ್ಲಾಪುರದ ಕಿರವತ್ತಿಯ ಪಾನಿಗುಂಡಿಯ ಬಳಿ ಗರ್ಭಿಣಿ ಅವರಿಗೆ ಆಂಬುಲೆನ್ಸ ಅಗತ್ಯವಿರುವ ಬಗ್ಗೆ 108ಗೆ ಫೋನ್ ಬಂದಿತ್ತು. ಅದರ ಪ್ರಕಾರ ಮಂಚಿಕೇರಿಯ ಚಾಲಕ ತಬ್ರೇಜ್ ಶೇಖ್ ಅಂಬುಲೆನ್ಸ ಓಡಿಸಿಕೊಂಡು ಹೋಗಿದ್ದರು. ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನಲೆ ಅವರು ಆಂಬುಲೆನ್ಸನ್ನು ವೇಗವಾಗಿ ಓಡಿಸುತ್ತಿದ್ದರು. ಕಿರವತ್ತಿ ದಾಟಿ ಮುಂದೆ 1ಕಿಮೀ ಹೋಗುವಾಗ ಕಾಡುಪ್ರಾಣಿಯೊಂದು ಆಂಬುಲೆನ್ಸಿನ ಮುಂದೆ ಬಂದಿತು. ಆಂಬುಲೆನ್ಸಿಗೆ ಆ ಕಾಡು ಪ್ರಾಣಿ ಗುದ್ದುವ ಹಾಗಿದ್ದು, ಇದನ್ನು ತಪ್ಪಿಸುವುದಕ್ಕಾಗಿ ಚಾಲಕ ತಬ್ರೇಜ್ ಶೇಖ್ ಹರಸಾಹಸ ನಡೆಸಿದರು.
ಪ್ರಾಣಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ತಬ್ರೇಜ್ ಶೇಖ್ ಅವರು ಆಂಬುಲೆನ್ಸನ್ನು ತಿರುಗಿಸಿದ್ದು, ಆ ವಾಹನ ರಸ್ತೆ ಪಕ್ಕದ ಸೇತುವೆಗೆ ಗುದ್ದಿತು. ಚಾಲಕ ವಾಹನದ ಮೇಲಿದ್ದ ನಿಯಂತ್ರಣ ಕಳೆದುಕೊಂಡಿದ್ದರಿ0ದ ಅಪಘಾತವಾಯಿತು. ಇದರಿಂದ ವಾಹನ ಜಖಂ ಆಗಿದ್ದು, ಸರ್ಕಾರಿ ಆಸ್ತಿಗೆ ನಷ್ಟವಾಯಿತು.
ತಾಲೂಕಾ ಸರ್ಕಾರಿ ಆಸ್ಪತ್ರೆಯ ಮೆಡಿಕಲ್ ಟೆಕ್ನಿಶಿಯನ್ ಮಂಜುನಾಥ ಕಾನಡೆ ಅವರು ಈ ಬಗ್ಗೆ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಅವರ ಸೂಚನೆ ಪ್ರಕಾರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು. ಚಾಲಕನ ವೇಗವೇ ಅಪಘಾತಕ್ಕೆ ಕಾರಣ ಎಂದವರು ದೂರಿದ್ದಾರೆ.