ಹೊನ್ನಾವರ ಕಡೆಯಿಂದ ಭಟ್ಕಳದ ಕಡೆ ಬರುತ್ತಿದ್ದ ವಾಹನ ತಪಾಸಣೆ ನಡೆಸಿದ ಪೊಲೀಸರು ಲಾರಿಯೊಂದರಲ್ಲಿ ಹಿಂಸಾತ್ಮಕ ರೀತಿ ಜಾನುವಾರು ಸಾಗಾಟ ನಡೆದಿರುವುದನ್ನು ಪತ್ತೆ ಮಾಡಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದ 19 ಜಾನುವಾರುಗಳನ್ನು ಶಿರಾಲಿ ತಪಾಸಣಾ ಕೇಂದ್ರದಲ್ಲಿ ಪೊಲೀಸರು ವಶಕ್ಕೆಪಡೆದಿದ್ದಾರೆ.
ವಾಹನವೊಂದರಲ್ಲಿ 5.70 ಲಕ್ಷ ರೂ ಮೌಲ್ಯದ ಜಾನುವಾರುಗಳ ಸಾಗಾಟ ನಡೆದಿತ್ತು. ಜಾನುವಾರುಗಳಿಗೆ ಮೇವು-ನೀರು ಸಹ ಕೊಡದೇ ಸಾಗಿಸಲಾಗುತ್ತಿತ್ತು. ಭಟ್ಕಳಕ್ಕೆ ಕರೆದೊಯ್ದು ಅವುಗಳನ್ನು ಕೊಲ್ಲಲು ದುಷ್ಕರ್ಮಿಗಳು ಹೊಂಚು ಹಾಕಿದ್ದರು. ಇದನ್ನು ಅರಿತ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಆ ವಾಹನದಲ್ಲಿದ್ದ ಮೂವರನ್ನು ಬಂಧಿಸಿದರು.
ಶಿರಾಲಿ ಚೆಕ್‌ಪೋಸ್ಟಿನಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಭರಮಪ್ಪ ಬೆಳಗಲಿ ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ಆಗ, ಬೇರೆ ಬೇರೆ ಊರಿನ ಚೇತನ ಕಡ್ಲಿ, ಸಂತೋಷ ಬೋರದ ಹಾಗೂ ದುರ್ಗಪ್ಪ ಛಲವಾದಿ ಸಿಕ್ಕಿಬಿದ್ದರು. ಪೋಲಿಸ್ ಸಿಬ್ಬಂದಿ ಅಣ್ಣಪ್ಪ ನಾಯ್ಕ, ರಾಮಯ್ಯ ನಾಯ್ಕ, ಬಸವನಗೌಡ ಪಾರ್ಟಿಲ್, ದೇವರಾಜ್ ಮೊಗೇರ ಸೇರಿ ಆ ಮೂವರನ್ನು ಜೈಲಿಗೆ ಕಳುಹಿಸಿದರು.