ನ್ಯಾಯಾಲಯದಲ್ಲಿ ಬಗೆಹರಿಯದ ವ್ಯಾಜ್ಯಗಳು ಗೋಕರ್ಣದ ಪುಟ್ಟ ಗಣಪನ ಮುಂದೆ ಬಗೆಹರಿದಿವೆ. ಅಂಥಹ ವಿಶೇಷ ಗಣಪತಿ ಕೋಟಿತೀರ್ಥದ ಸನೀಹದಲ್ಲಿದೆ.
ವರ್ಷಕ್ಕೊಮ್ಮೆ ಆಗಮಿಸುವ ಅಂಗಾರಕ ಸಂಕಷ್ಟಿ ದಿನದ ಗಣಪತಿ ಆರಾಧನೆಗೆ ಗೋಕರ್ಣದಲ್ಲಿ ವಿಶೇಷ ಮಹತ್ವವಿದೆ. ಗೋಕರ್ಣದ ಕೋಟಿತೀರ್ಥದ ಉತ್ತರ ದಿಕ್ಕಿನಲ್ಲಿರುವ ತೀರ್ಥ ಗಣೇಶ ಸನ್ನಿಧಾನದಲ್ಲಿಯೂ ಈ ದಿನ ವಿಶೇಷ ಪೂಜೆ ನಡೆಯುತ್ತದೆ. ತಲೆತಲಾಂತರಗಳಿoದ ಮಹಾಬಲೇಶ್ವರ ಜೋಶಿ ಕುಟುಂಬದವರು ಇಲ್ಲಿ ಪೂಜೆ ಸಲ್ಲಿಸುತ್ತಿದ್ದು, ಅವರ ಕುಟುಂಬದವರಿಗೆ ದೊರೆತ ಮೂರ್ತಿ ವ್ಯಾಜ್ಯ ಪರಿಹಾರಗಳಿಂದ ಪ್ರಸಿದ್ಧಿ. ಈ ಪುಟ್ಟ ಗಣಪನ ಬಳಿ ಭಕ್ತಿಯಿಂದ ಬೇಡಿಕೊಂಡರೆ ವಿಜ್ಞಗಳು ದೂರವಾಗುತ್ತದೆ ಎಂಬುದು ನಂಬಿಕೆ. ವೈದಿಕರು ನೀರಿನಲ್ಲಿ ಮುಳುಗಿ ಜಪ ಮಾಡಿದ ನಂತರ ಈ ಗಣಪನಿಗೆ ಅಭಿಷೇಕ ಮಾಡುವುದು ವಾಡಿಕೆ.
ದೀರ್ಘಕಾಲದಿಂದ ಬಗೆಹರಿಯದ ಕೋರ್ಟ ವ್ಯಾಜ್ಯಗಳು ಇಲ್ಲಿ ನಡೆದುಕೊಂಡರೆ ಬಗೆಹರಿಯುತ್ತದೆ ಎಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬರುತ್ತಾರೆ. ಗಣಪನೆ ಆರಾಧನೆ ಮಾಡಿದ ನಂತರ ಕಷ್ಟ ದೂರವಾಗಿದೆ ಎಂದು ಮತ್ತೊಮ್ಮೆ ಬಂದು ಪೂಜೆ ಸಲ್ಲಿಸುವವರು ಸಿಗುತ್ತಾರೆ.
Discussion about this post