ಮೀನುಗಾರಿಕೆ ಉತ್ತರ ಕನ್ನಡ ಪ್ರಮುಖ ಆದಾಯದ ಮೂಲ. ಪ್ರತಿ ವರ್ಷ 1 ಸಾವಿರ ಕೋಟಿಗೂ ಅಧಿ ವಹಿವಾಟು ಮೀನುಗಾರಿಕೆಯಿಂದ ನಡೆಯುತ್ತದೆ. ಲಕ್ಷಕ್ಕೂ ಅಧಿಕ ಕುಟುಂಬಗಳು ಈ ವೃತ್ತಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕಾರವಾರದ ಬೈತಖೋಲ್, ಮುದಗಾ, ಬೇಲೆಕೇರಿ, ತದಡಿ, ಹೊನ್ನಾವರ, ಕಾಸರಕೋಡು, ಮಂಕಿ, ಭಟ್ಕಳ ಸೇರಿ ಆಳ ಸಮುದ್ರ ಮೀನುಗಾರಿಕೆಗೆ 5 ಸಾವಿರಕ್ಕೂ ಅಧಿಕ ದೋಣಿಗಳಿವೆ. ಇಲ್ಲಿನ ಮೀನು ನೆರೆರಾಜ್ಯಗಳಿಗೆ ಸಹ ರಪ್ತಾಗುತ್ತದೆ. ಆದರೆ, ಈ ಬಾರಿ ಅರಬ್ಬಿ ಸಮುದ್ರದಲ್ಲಿ ಸಹ ಬರದ ಛಾಯೆ ಆವರಿಸಿದೆ. ಇದರಿಂದ ಮತ್ಸö್ಯ ಭೇಟೆಗೆ ಹೋದವರಿಗೆ ನಿರಾಸೆಯಿಂದ ಮರಳಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ 15,957 ಮೆಟ್ರಿಕ್ ಟನ್‌ಗಳಷ್ಟು ಮೀನು ಇಳುವರಿ ಕಡಿಮೆಯಾಗಿದೆ. 2023ರ ಏಪ್ರಿಲ್‌ನಿಂದ 20204ರ ಮಾರ್ಚಿನವರೆಗೆ 1004 ಕೋಟಿ ರೂ ಮೌಲ್ಯದ 1.15 ಲಕ್ಷ ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು. 2022ರಲ್ಲಿ 1.31 ಲಕ್ಷ ಮೆಟ್ರಿಕ್ ಟನ್ ಮೀನು ಹಿಡಿಯಲಾಗಿತ್ತು. 2022 ಹಾಗೂ 23ರಲ್ಲಿ ಮಾನ್ಸೂನ್ ನಂತರ ಹಾಗೂ ಬೇಸಿಗೆಯಲ್ಲಿಯೂ ಉತ್ತಮ ಇಳುವರಿ ಕಂಡುಬoದಿತ್ತು. ಆದರೆ, ಈ ಹಂಗಾಮಿನಲ್ಲಿ ಡಿಸೆಂಬರ್‌ನಿAದಲೇ ಸಮುದ್ರದ ಮೀನುಗಳು ಖಾಲಿಯಾಗಿವೆ. ಡಿಸೆಂಬರ್‌ನಿoದ ಮಾರ್ಚ್ ಅವಧಿಯಲ್ಲಿ ಪ್ರತಿ ತಿಂಗಳು ಸುಮಾರು 1200ರಿಂದ 1400 ಮೆಟ್ರಿಕ್ ಟನ್ ಮೀನಿನ ಇಳುವರಿ ಆಗುತ್ತಿತ್ತು. ಆದರೆ, ಈ ವರ್ಷ ಇಳುವರಿ 900 ಟನ್ ಸಹ ದಾಟಿಲ್ಲ.
Discussion about this post