ಹಿoದೂತ್ವದ ಫೈರ್‌ಬ್ಯಾಂಡ್ ಎಂದು ಗುರುತಿಸಿಕೊಂಡಿರುವ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಮನೆಯಲ್ಲಿ ಅಗ್ನಿ ಅವಘಡ ಉಂಟಾಗಿದೆ.
ಶಿರಸಿಯ ಕೆ ಎಚ್ ಬಿ ಕಾಲೋನಿಯಲ್ಲಿ ಅವರ ಮನೆಯಿದ್ದು, ವಿದ್ಯುತ್ ಶಾರ್ಟ ಸರ್ಕಿಟ್’ನಿಂದ ಅನಾಹುತ ನಡೆದಿದೆ. ಬೆಂಕಿಯ ಜ್ವಾಲೆಗೆ ಮನೆ ಮೇಲ್ಬಾಗದ ಚಾವಣಿ ಸುಟ್ಟು ಹೋಗಿದೆ. ಅಲ್ಲಿದ್ದ ಕೆಲ ಯಂತ್ರಗಳು ಕರಕಲಾಗಿವೆ. ಮನೆಯ ಗೋಡೆಗಳು ಕಪ್ಪು ಬಣ್ಣಕ್ಕೆ ತಿರುಗಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದಾರೆ. ಅಗ್ನಿ ಅವಘಡದಿಂದ ಅವರಿಗೆ ಅಂದಾಜು 50 ಸಾವಿರ ರೂ ನಷ್ಟವಾಗಿದೆ.
Discussion about this post