ಹಳಿಯಾಳ ಪಟ್ಟಣದ ದೇಸಾಯಿ ಗಲ್ಲಿಯಲ್ಲಿ ಭಾನುವಾರ ರಾತ್ರಿ 10.30ರ ಸುಮಾರಿಗೆ ಪರಶುರಾಮ ಹಣಬರ ಎನ್ನುವವರ ಮನೆಯಲ್ಲಿ ಸಿಲೆಂಡರ್ ಸ್ಫೋಟಗೊಂಡಿದೆ.
ಪರಶುರಾಮ ಹಣಬರ ಸ್ಥಿತಿ ಚಿಂತಾಜನಕವಾಗಿದೆ. ಶೇ 80ರಷ್ಟು ಪ್ರಮಾಣದಲ್ಲಿ ಅವರಿಗೆ ಸುಟ್ಟಗಾಯಗಳಾಗಿದೆ. ಇದರೊಂದಿಗೆ ಯಲ್ಲಪ್ಪ ಹಣಬರ ಹಾಗೂ ನಾಗರಾಜ ಹಣಬರ ಅವರು ಶೇ 20ರಷ್ಟು ಸುಟ್ಟಗಾಯಗಳಿಂದ ಬಳಸುತ್ತಿದ್ದಾರೆ.
ಸಿಲೆಂಡರ್ ಸ್ಫೋಟ ಅವಘಡವಾದ ಕೂಡಲೇ ಸುತ್ತಮುತ್ತಲಿನ ಜನ ಗಾಬರಿಗೊಂಡು ಹೊರ ಓಡಿಹೋಗಿದ್ದರು. ತಕ್ಷಣ ಗಾಯಾಳುಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿದರು. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ತಕ್ಷಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ