6
  • Latest
Accusations of supplying expired cylinders: Fraud in weight and injustice in business!

ಅವಧಿ ಮೀರಿದ ಸಿಲೆಂಡರ್ ಪೂರೈಕೆ ಆರೋಪ: ತೂಕದಲ್ಲಿಯೂ ಮೋಸ.. ವ್ಯವಹಾರದಲ್ಲಿಯೂ ಅನ್ಯಾಯ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅವಧಿ ಮೀರಿದ ಸಿಲೆಂಡರ್ ಪೂರೈಕೆ ಆರೋಪ: ತೂಕದಲ್ಲಿಯೂ ಮೋಸ.. ವ್ಯವಹಾರದಲ್ಲಿಯೂ ಅನ್ಯಾಯ!

AchyutKumar by AchyutKumar
in ಸ್ಥಳೀಯ
Accusations of supplying expired cylinders: Fraud in weight and injustice in business!

ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅವಧಿ ಮೀರಿದ ಗ್ಯಾಸ್ ಸಿಲೆಂಡರ್ ಸರಬರಾಜು ಆಗುತ್ತಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಗ್ಯಾಸ್ ಸಿಲೆಂಡರ್ ತೂಕದಲ್ಲಿಯೂ ವ್ಯತ್ಯಾಸವಿರುವ ಬಗ್ಗೆ ಗ್ರಾಹಕರು ದೂರಿದ್ದಾರೆ.

ADVERTISEMENT

ಮಾನು ಇಂಡೇನ್ ಎಂಬ ವಿತರಕರ ಮೂಲಕ ಅಂಕೋಲಾದ ಕೊಡ್ಲಗದ್ದೆ ಭಾಗಕ್ಕೆ ಅಡುಗೆ ಅನಿಲದ ಸಿಲೆಂಡರ್ ಪೂರೈಕೆ ಆಗುತ್ತದೆ. ಪ್ರತಿ ಬುಧವಾರ ಈ ಭಾಗಕ್ಕೆ ಅಡುಗೆ ಅನಿಲ ಹೊತ್ತ ವಾಹನ ಬರುತ್ತದೆ. ಕೊಡ್ಲಗದ್ದೆಯ ಸುಮಂತ ಹೆಗಡೆ ಅವರು ಕಳೆದ ಮಂಗಳವಾರ ಗ್ಯಾಸ್ ಬುಕ್ ಮಾಡಿದ್ದು, ಅವರಿಗೆ ಬುಧವಾರ ಸಿ-25 ಎಂದು ನಮೂದಿಸಿದ ಸಿಲೆಂಡರನ್ನು ವಿತರಿಸಲಾಗಿದೆ. ಸಿ-25 ಅಂದರೆ ಸೆಪ್ಟೆಂಬರ್ ಅಂತ್ಯದವರೆಗೆ ವಾಯಿದೆಯಿರುವ ಸಿಲೆಂಡರ್ ಆಗಿದ್ದು, ಒಂದೆರಡು ತಿಂಗಳ ಅವಧಿಯಲ್ಲಿ ಸಿಲೆಂಡರ್ ಖಾಲಿ ಮಾಡಲು ಆಗದೇ ಇದ್ದರೆ ಅದು ಸ್ಪೋಟಿಸುವ ಆತಂಕವಿದೆ ಎಂಬುದು ಅವರ ಕುಟುಂಬದವರ ಆತಂಕ.

`ಈ ಮೊದಲು ಅವಧಿ ಮೀರಿದ ಸಿಲೆಂಡರ್ ವಿತರಣೆ ನಡೆದಿತ್ತು. ಅದಕ್ಕೆ ಆಕ್ಷೆಪಣೆ ಸಲ್ಲಿಸಿದ ಕಾರಣ ಅವಧಿ ಮುಗಿಯಲು ಕೆಲ ತಿಂಗಳು ಬಾಕಿಯಿರುವ ಸಿಲೆಂಡರ್ ಪೂರೈಸಲಾಗುತ್ತಿದೆ’ ಎಂಬುದು ಕೊಡ್ಲಗದ್ದೆಯ ಅನಂತ ಹೆಗಡೆ ಅವರ ದೂರು. ಈ ಬಗ್ಗೆ ಪ್ರಶ್ನಸಿದರೆ ಗ್ಯಾಸ್ ಎಜನ್ಸಿಯವರು `ಬೇಕಾದರೆ ತೆಗೆದುಕೊಳ್ಳಿ. ಇಲ್ಲವಾದರೆ ಬಿಡಿ’ ಎಂದು ದಬಾಯಿಸುವ ಬಗ್ಗೆಯೂ ಆ ಭಾಗದ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ.

Advertisement. Scroll to continue reading.

ಗ್ಯಾಸ್ ಸಿಲೆಂಡರ್ ಮೇಲೆ ಬರೆಯಲಾದ ಮಾಹಿತಿ ಪ್ರಕಾರ ಸಿಲೆಂಡರ್ 30.400 ಕೆಜಿ ತೂಕ ಹೊಂದಿರಬೇಕು. ಆದರೆ, ವಿತರಣೆ ಆದ ಸಿಲೆಂಡರ್ 29.700 ಕೆಜಿ ಮಾತ್ರ ತೂಕವಿದೆ. ಅನೇಕ ಸಲ 1 ಕೆಜಿಗೂ ಅಧಿಕ ವ್ಯತ್ಯಾಸದ ಸಿಲೆಂಡರ್ ಈ ಭಾಗಕ್ಕೆ ಸರಬರಾಜು ಆದ ಉದಾಹರಣೆಗಳಿವೆ. `ಗ್ರಾಹಕರು ಗ್ಯಾಸ್ ಪಡೆಯುವ ಮುನ್ನವೇ ತೂಕವನ್ನು ಪರಿಶೀಲಿಸಬೇಕು. ತೂಕದಲ್ಲಿ ವ್ಯತ್ಯಾಸ ಬಂದ ಬಗ್ಗೆ ವಿಚಾರಿಸಲಾಗುತ್ತದೆ’ ಎಂದು ಇಂಡಿಯನ್ ಗ್ಯಾಸ್’ನ ಐಒಸಿ ಸಂಜೀವ್ ಪ್ರತಿಕ್ರಿಯಿಸಿದರು. `ಸಿ-25 ಎಂದು ಬರೆದಿರುವ ಗ್ಯಾಸ್ ಸಿಲೆಂಡರ್’ಗೆ ಸೆಪ್ಟೆಂಬರ್ ಮುಗಿಯುವವರೆಗೂ ಬಳಕೆಗೆ ಅವಕಾಶವಿದೆ. ಅಷ್ಟರೊಳಗೆ ಅದನ್ನು ಬಳಸಬೇಕು’ ಎಂದವರು ಮಾಹಿತಿ ನೀಡಿದರು.

Advertisement. Scroll to continue reading.

`ಗ್ಯಾಸ್ ಸಿಲೆಂಡರಿನ ತೂಕದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ದೂರು ಬಂದಿದೆ. ತೂಕ ಮತ್ತು ಅಳತೆ ಇಲಾಖೆಯ ವ್ಯಾಪ್ತಿಗೆ ಈ ದೂರು ಬರಲಿದ್ದು, ಪರಿಶೀಲನೆಗೆ ಸೂಚಿಸಲಾಗಿದೆ’ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಅವರು ಮಾಹಿತಿ ನೀಡಿದರು. ಗ್ಯಾಸ್ ಸಿಲೆಂಡರಿನ ತೂಕದಲ್ಲಿನ ವ್ಯತ್ಯಾಸ ಇದೇ ಮೊದಲಲ್ಲ. ಅವಧಿ ಮೀರಿರುವ ಹಾಗೂ ಅವಧಿ ಮೀರಲು ಕೆಲವೇ ದಿನ ಬಾಕಿಯಿರುವ ಗ್ಯಾಸ್ ಸಿಲೆಂಡರ್ ಬಗ್ಗೆ ತಿಳಿಸಿದರೂ ಎಜನ್ಸಿಯವರು ಗಂಭೀರವಾಗಿ ಪರಿಗಣಿಸಿಲ್ಲ. ಸಿಲೆಂಡರ್ ಡ್ಯಾಮೇಜ್ ಸ್ಥಿತಿಯಲ್ಲಿದ್ದರೂ ಕೇಳುವವರಿಲ್ಲ’ ಎಂದು ಅನೇಕರು ಅಳಲು ತೋಡಿಕೊಂಡರು.

`ತೂಕ, ಅಳತೆ ಹಾಗೂ ವಾಯಿದೆ ಬಗ್ಗೆ ಗ್ರಾಮೀಣ ಭಾಗದ ಜನ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊAಡು ವ್ಯಾಪಾರಿಗಳು ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಜನ ಧೈರ್ಯವಾಗಿ ದೂರು ಕೊಡಬೇಕು’ ಎಂದು ಅಂಕೋಲಾದ ಅಕ್ಷಯ ನಾಯ್ಕ ಅವರು ಅಭಿಪ್ರಾಯಪಟ್ಟರು. ಅಡುಗೆ ಅನಿಲ ವಿತರಣೆಯಲ್ಲಿನ ಲೋಪದ ಬಗ್ಗೆ ಗ್ಯಾಸ್ ಎಜನ್ಸಿಗೆ ಫೋನ್ ಮಾಡಿ, ಅನ್ಯಾಯಕ್ಕೆ ಒಳಗಾದ ಗ್ರಾಹಕರ ಫೋನ್ ಸಂಖ್ಯೆ ನೀಡಲಾಗಿದೆ. `ಈ ಬಗ್ಗೆ ವಿಚಾರಿಸಿ ಪ್ರತಿಕ್ರಿಯಿಸುವೆ’ ಎಂದ ಎಜನ್ಸಿಯವರು ನಂತರ ಪ್ರತಿಕ್ರಿಯೆ ನೀಡಲಿಲ್ಲ. ಸದ್ಯ ದೂರುದಾರರು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಹ ತಮಗಾದ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ.

Previous Post

ಸಿಲೆಂಡರ್ ಸ್ಪೋಟ: ಸ್ಥಿತಿ ಚಿಂತಾಜನಕ!

Next Post

ರಾತ್ರಿ ಬರ್ತಾರೆ.. ಹಸು ಕದಿತಾರೆ: ಐಷಾರಾಮಿ ಕಾರಿಗೆ ನಕಲಿ ನೋಂದಣಿ!

Next Post
Coming at night... stealing cows Fake registration for a luxury car!

ರಾತ್ರಿ ಬರ್ತಾರೆ.. ಹಸು ಕದಿತಾರೆ: ಐಷಾರಾಮಿ ಕಾರಿಗೆ ನಕಲಿ ನೋಂದಣಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ