ಒಂದುವರೆ ಲಕ್ಷ ರೂ ಸಾಲ ತೀರಿಸಲಾಗದ ಕಾರಣ ರೈತ ಲೊಕೇಶ ಎಸಳಿ ಸಾವನಪ್ಪಿದ್ದಾರೆ. ಕೆಲ ದಿನದ ಹಿಂದೆ ಐದುವರೆ ಲಕ್ಷ ರೂ ಸಾಲ ಮಾಡಿಕೊಂಡಿದ್ದ ಓಣಿಕೇರಿಯ ರತ್ನೋಜಿ ಕೋಣಕೇರಿ ಆತ್ಮಹತ್ಯೆಗೆ ಶರಣಾಗಿದ್ದು, ಒಂದೇ ವಾರದಲ್ಲಿ ಮುಂಡಗೋಡದಲ್ಲಿ ಸಾಲಬಾಧೆಯಿಂದ ಎರಡು ಸಾವಾಗಿದೆ.
ಮಳಗಿಯ ಲೊಕೇಶ ಎಸಳಿ ಅವರು ತಾಯಿ ಹೆಸರಿನಲ್ಲಿ 1.20 ಲಕ್ಷ ರೂ ಸಾಲ ಮಾಡಿದ್ದರು. ಮಳಗಿಯ ವ್ಯವಸಾಯ ಸಹಕಾರಿ ಸಂಘದಲ್ಲಿ ಸಾಲ ಹಾಗೇ ಇತ್ತು. ಇದರೊಂದಿಗೆ ಶಿರಸಿಯ ಅನ್ನಪೂರ್ಣ ಸಂಘದಲ್ಲಿ ಸಹ ಲೊಕೇಶ ಎಸಳಿ 30 ಸಾವಿರ ರೂ ಸಾಲ ಮಾಡಿದ್ದರು. ಆದರೆ, ಕಳೆದ ಬಾರಿ ಫಸಲು ಕೈಗೆ ಬರದ ಕಾರಣ ಸಾಲ ಮರುಪಾವತಿ ಆಗಿರಲಿಲ್ಲ.
ಈ ವರ್ಷ ಉಳುಮೆ ಮಾಡಲು ಲೊಕೇಶ ಎಸಳಿಯವರು ಮತ್ತೆ ಸಾಲ ಮಾಡಿದ್ದು, ಸಾಲ ತೀರಿಸುವುದು ಹೇಗೆ? ಎಂಬ ಚಿಂತೆಯಲ್ಲಿದ್ದರು. ಅದೇ ಚಿಂತೆಯಲ್ಲಿ ಅವರು ಜೂನ್ 16ರಂದು ಹೊಲಕ್ಕೆ ಹೋಗಿ ವಿಷ ಸೇವಿಸಿದರು. ಇದನ್ನು ಅರಿತ ಕುಟುಂಬದವರು ಲೋಕೇಶ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್’ಗೆ ಕರೆದೊಯ್ದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.
ಆಸ್ಪತ್ರೆಯಲ್ಲಿ ಲೊಕೇಶ್ ಅವರು ಸಾವನಪ್ಪಿದರು. ಇದರಿಂದ ಲೊಕೇಶ್ ಅವರ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತೇ ವಿನ: ಅವರ ಸಾಲ ಇದರಿಂದ ತೀರಲಿಲ್ಲ.