ಕುಮಟಾ ಬಳಿಯ ಮಿರ್ಜಾನ್ ನಾಡಕಚೇರಿ ಅವ್ಯವಸ್ಥೆ ವಿರುದ್ದ ಕರವೇ ಅಧ್ಯಕ್ಷ ಭಾಸ್ಕರ ಪಟಗಾರ್ ಕಿಡಿಕಾರಿದ್ದಾರೆ. ಅವ್ಯವಸ್ಥೆ ಸರಿಪಡಿಸದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
ಈ ಬಗ್ಗೆ ಗುರುವಾರ ತಹಶೀಲ್ದಾರ್ ಕಚೇರಿಗೆ ನೋಟಿಸ್ ನೀಡಿದ ಅವರು ಅಲ್ಲಿನ ಅವ್ಯವಸ್ಥೆಗಳ ಪಟ್ಟಿ ಒದಗಿಸಿದರು. `ಮಿರ್ಜಾನ್ ನಾಡಕಛೇರಿ ಅವ್ಯವಸ್ಥೆಯಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ’ ಎಂದು ದೂರಿದರು. `ಈ ನಾಡ ಕಚೇರಿಯ ವ್ಯಾಪ್ತಿಗೆ ಅನೇಕ ಗ್ರಾಮಗಳು ಬರುತ್ತಿವೆ. ಈ ಕಚೇರಿಯಿಂದ ತಮಗೆಬೇಕಾದ ದಾಖಲೆಗಳನ್ನು ಪಡೆದುಕೊಳ್ಳಲು ದೂರ ದೂರದ ಕಡೆಯಿಂದ ಬರುತ್ತಾರೆ. ಆದರೆ, ಅಲ್ಲಿ ಕೆಲಸ ಮಾತ್ರ ಆಗುತ್ತಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.
`ಕಚೇರಿಗೆ ಬಂದರೆ ಕಚೇರಿಯಲ್ಲಿರುವವರು ಸರ್ವರ್ ಇಲ್ಲಾ. ವಿದ್ಯುತ್ ಇಲ್ಲ ಎನ್ನುತ್ತಾರೆ. ಈ ಕಚೇರಿಗೆ ಬದು ಹೋಗುವವರ ಶ್ರಮದ ಜೊತೆಗೆ ದಿನದ ದುಡಿಮೆಯೂ ಹಾಳಾಗುತ್ತದೆ’ ಎಂದು ವಿವರಿಸಿದರು. ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.