1994ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು 31 ವರ್ಷದ ನಂತರ ಶಿರಸಿ ಪೊಲೀಸರು ಬಂಧಿಸಿದ್ದಾರೆ.
1994ರ ಮಾರ್ಚ 3ರಂದು ಶಿರಸಿ-ಕುಮಟಾ ರಸ್ತೆಯಲ್ಲಿ ಅಪಘಾತವೊಂದು ನಡೆದಿತ್ತು. ಆ ಅಪಘಾತದಲ್ಲಿ ಮಂಜಗುಣಿ ಕೋಖಂಡದ ಲೀಲಾವತಿ ಹೆಗಡೆ ಅವರು ಸಾವನಪ್ಪಿದ್ದರು. ಲಾರಿ ಚಾಲಕ ಇಲಿಯಾಸ್ ಪೌಲ್ 1996ರಿಂದ ನಾಪತ್ತೆಯಾಗಿದ್ದು, ಪೊಲೀಸರಿಗೆ ಮಾತ್ರ ಸಿಕ್ಕಿರಲಿಲ್ಲ. ನ್ಯಾಯಾಲಯಕ್ಕೆ ಸಹ ಹಾಜರಾಗಿರಲಿಲ್ಲ. ಆದರೆ, ಅಂದು ನಡೆದ ಅಪಘಾತ ಪ್ರಕರಣ ಮಾತ್ರ ಪೊಲೀಸ್ ದಾಖಲೆಯಿಂದ ಕಡಿಮೆ ಆಗಿರಲಿಲ್ಲ.
ಹೀಗಾಗಿ 1994ರಲ್ಲಿ ಶಿರಸಿ-ಕುಮಟಾ ರಸ್ತೆಯ ಕಸಗೇ ಬಳಿ ನಡೆದ ಅಪಘಾತ ಪ್ರಕರಣದ ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಲೇ ಇದ್ದರು. ಅಪಘಾತ ನಡೆದ ದಿನ ಲಾರಿ ನಿಲ್ಲಿಸದೇ ಆರೋಪಿ ಪರಾರಿಯಾಗಿದ್ದು ಸಹ ಪೊಲೀಸ್ ದಾಖಲೆಯಲ್ಲಿ ಹಾಗೇ ಇತ್ತು. ಲಾರಿ ಸಂಖ್ಯೆ ಆಧಾರದಲ್ಲಿ ಪೊಲೀಸರು ಆರೋಪಿಯ ಶೋಧ ನಡೆಸಿದ್ದು, 31 ವರ್ಷಗಳ ತರುವಾಯ ಆ ದಿನ ಅಪಘಾತ ಮಾಡಿದ್ದ ಇಲಿಯಾಸ್ ಪೌಲ್ ಸಿಕ್ಕಿಬಿದ್ದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಜಗದೀಶ, ಶಿರಸಿ ಉಪವಿಭಾಗದ ಪೊಲೀಸ್ ಉಪಾಧಿಕ್ಷಕಿ ಗೀತಾ ಪಾಟೀಲ್ ಅವರು ಈ ವಿಷಯದ ಬಗ್ಗೆ ಮಾಹಿತಿಪಡೆದರು. ಆರೋಪಿ ಕೇರಳದಲ್ಲಿ ಅಡಗಿರುವ ಬಗ್ಗೆ ಅವರು ಅಧೀನ ಅಧಿಕಾರಿಗಳಿಗೆ ಸೂಚಿಸಿದರು.
ಶಿರಸಿ ಗ್ರಾಮೀಣ ಠಾಣೆಯ ಪಿ ಐ ಮಂಜುನಾಥ್ ಎಂ, ಪಿಎಸ್‌ಐ ಸಂತೋಷಕುಮಾರ್ ಎಮ್, ಅಶೋಕ್ ರಾಠೋಡ್ ನೇತ್ರತ್ವದಲ್ಲಿ ಎಎಸ್‌ಐ ಪ್ರಕಾಶ್ ತಳವಾರ, ಪೊಲೀಸ್ ಸಿಬ್ಬಂದಿ ಶಾಂತಲಾ ನಾಯ್ಕ, ಎಎಸ್‌ಐ ಪ್ರಕಾಶ್ ತಳವಾರ, ಪತ್ರೆಪ್ಪ ಪಾಟೀಲ್ ಆರೋಪಿಯನ್ನು ಹಿಡಿದರು. ನಂತರ ಪೊಲೀಸರು ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿದರು.