ಜೊಯಿಡಾದ ರಾಮನಗರದಿಂದ ಗೋವಾ ಕಡೆ ಹೋಗುತ್ತಿದ್ದ ಬೈಕಿಗೆ ಅಪರಿಚಿತ ಗಾಡಿ ಗುದ್ದಿದ್ದು, ಬೈಕ್ ಸವಾರ ನಾಗೇಂದ್ರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಜೊಯಿಡಾದಿಂದ ನಿತ್ಯ ನೂರಾರು ಜನ ಉದ್ಯೋಗ ಅರೆಸಿ ಗೋವಾಗೆ ಹೋಗುತ್ತಾರೆ. ಅದರಂತೆ ಜೊಯಿಡಾದ ಮಲಂಬಾ ಬಳಿಯ ಮಿರಾಶಿವಾಡಾದ ನಾಗೇಂದ್ರ ಅವರು ಶುಕ್ರವಾರ ಬೈಕಿನಲ್ಲಿ ಗೋವಾ ಕಡೆ ಹೊರಟಿದ್ದು, ಆನಮೋಡದ ಬಳಿ ಅವರ ಬೈಕು ಅಪಘಾತಕ್ಕೀಡಾಗಿದೆ.
ನಾಗೇಂದ್ರ ಅವರು ಅಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಅಪಘಾತವನ್ನುಂಟು ಮಾಡಿದ ಅಪರಿಚಿತ ವಾಹನದಲ್ಲಿದ್ದವರು ನೆರವಿಗೆ ಬರಲಿಲ್ಲ. ಹೀಗಾಗಿ ನಾಗೇಂದ್ರ ಅವರು ಅಲ್ಲಿಯೇ ಸಾವನಪ್ಪಿದರು. ರಾಮನಗರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಸಾಗಿದೆ.