ಭಟ್ಕಳದಲ್ಲಿ ಅಪಘಾತ ತಪ್ಪಿಸಲು ಹೋದ ಬೈಕ್ ಸವಾರ ಹೆದ್ದಾರಿ ಅಂಚಿನ ಹೊಂಡಕ್ಕೆ ಬಿದ್ದಿದ್ದು, ಈ ದುರಂತದಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.
ಗುರುವಾರ ನಡೆದ ಈ ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೊತೆಗೆ ಆ ದೃಶ್ಯಾವಳಿಗಳು ಸಾಕಷ್ಟು ವೈರಲ್ ಆಗಿದೆ. ಸಂಶುದ್ಧೀನ್ ಸರ್ಕಲ್ ಸಮೀಪದ ಸತ್ಕಾರ್ ಹೊಟೇಲ್ ಮುಂದೆ ದೊಡ್ಡ ಪ್ರಮಾಣದಲ್ಲಿ ಹೊಂಡ ಬಿದ್ದಿದ್ದು, ಒಂದು ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿಯಾಗಿ ಆ ಹೊಂಡದಲ್ಲಿ ಬೈಕ್ ಸವಾರರು ಬಿದ್ದಿದ್ದಾರೆ.
ಒಂದು ವಾರದ ಹಿಂದೆ ಮಳೆ ನೀರು ಹರಿದು ಹೋಗಲು ಹೆದ್ದಾರಿ ಪಕ್ಕದಲ್ಲಿದ್ದ ರಾಜಕಾಲುವೆ ಬಿಡಿಸಿದ್ದರು. ಈ ವೇಳೆ ಅಲ್ಲಿ ಹೊಂಡ ತೆಗೆದಿದ್ದರು. ಆದರೆ, ಆ ಹೊಂಡದಿoದ ಯಾವ ಪ್ರಯೋಜನವೂ ಆಗಿರಲಿಲ್ಲ. ಮಳೆ ಬಂದಾಗ ಮತ್ತೆ ರಸ್ತೆ ಮೇಲೆ ನೀರು ನಿಲ್ಲುತ್ತಿದ್ದು, ಹೊಂಡವನ್ನು ಮುಚ್ಚಿರಲಿಲ್ಲ.
ರಸ್ತೆ ಅಗಲೀಕರಣ ಮಾಡುವ ವೇಳೆ ರಸ್ತೆಯ 2 ಬದಿಗಳಲ್ಲಿ ಚರಂಡಿ ಮಾಡಿದಿರುವ ಕಾರಣ ಇದೀಗ ಅನೇಕ ಅವಾಂತರ ನಡೆಯುತ್ತಿದೆ. ಹೀಗಾಗಿ ಇನ್ನಷ್ಟು ಅಪಾಯ ನಡೆಯುವ ಮುನ್ನ ಹೆದ್ದಾರಿ ಅಭಿವೃದ್ಧಿ ಗುತ್ತಿಗೆಪಡೆದ ಐಆರ್‌ಬಿ ಕಂಪನಿ ಗಮನಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಇಲ್ಲಿ ನೋಡಿ..