ಶಿರಸಿ ಬಳಿ ಶುಕ್ರವಾರ ಅಡುಗೆಮನೆಯಲ್ಲಿದ್ದ ಸಿಲೆಂಡರ್ ಸ್ಪೋಟವಾಗಿದೆ. ಸಿಲೆಂಡರ್ ಸ್ಪೋಟಿಸಿದ ಪರಿಣಾಮ ಮನೆ ಕರಕಲಾಗಿದೆ.
ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಬಿದ್ರಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಸ್ಪೋಟದ ಸದ್ದು ಕೇಳಿಸಿತು. ಆ ಭಾಗದ ಜನ ಹತ್ತಿರ ಹೋಗಿ ನೋಡಿದಾಗ ಸಿಲೆಂಡರ್ ಸ್ಪೋಟವಾಗಿರುವುದು ಗಮನಕ್ಕೆ ಬಂದಿತು. ತಕ್ಷಣ ಊರಿನವರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು.
ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ದೊಡ್ಡ ಪ್ರಮಾಣದ ಅನಾಹುತ ತಡೆದರು. ಬೇಬಿ ಆಯುಷಾ ಅಬ್ದುಲ್ ಕರೀ ಅವರಿಗೆ ಸೇರಿದ ಮನೆಯಲ್ಲಿ ಈ ಸ್ಪೋಟ ನಡೆದಿದೆ. ಮನೆಯಲ್ಲಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮನೆ ಪೂರ್ತಿ ಸುಟ್ಟು ಕರಕಲಾಗಿದೆ.
ಒಳಗಿದ್ದ ಸಾಮಗ್ರಿಗಳೆಲ್ಲವೂ ಸುಟ್ಟಿವೆ. ಎಲ್ಲಾ ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿವೆ. ಈ ಸ್ಪೋಟಕ್ಕೆ ಕಾರಣ ಗೊತ್ತಾಗಿಲ್ಲ. ಆ ಬಗ್ಗೆಯೂ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.