ಆತ್ಮರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಬಂದೂಕು ಹಾಗೂ ಪಿಸ್ತೂಲು ಪಡೆಯುವವರಿಗೆ ತರಬೇತಿ ಕಡ್ಡಾಯ. ಹೀಗಾಗಿ ಈ ಬಾರಿ ಶಿರಸಿಯಲ್ಲಿ ಬಂದೂಕು ತರಬೇತಿ ನೀಡಲು ನಿರ್ಧರಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಆರ್‌ಪಿಐ, ಡಿಎಆರ್ ವಿಭಾಗದಿಂದ ಈ ತರಬೇತಿ ನೀಡಲಾಗುತ್ತದೆ. ಭವಿಷ್ಯದಲ್ಲಿ ಪಿಸ್ತುಲು-ಬಂದೂಕು ಪರವಾನಿಗೆ ಪಡೆಯಲು ಈ ತರಬೇತಿಯಲ್ಲಿ ಭಾಗವಹಿಸಿದ ಪ್ರಮಾಣ ಪತ್ರ ಬೇಕಾಗಿರುತ್ತದೆ. ಜೂನ್ 22 ಹಾಗೂ 22ರಂದು ಎರಡು ದಿನಗಳ ಕಾಲ ಶಿರಸಿಯಲ್ಲಿ ಈ ತರಬೇತಿ ನಡೆಯಲಿದೆ.
ತರಬೇತಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಬೆಳಗ್ಗೆ 8 ಗಂಟೆಗೆ ಶಿರಸಿಗೆ ಬರಲು ಸೂಚಿಸಲಾಗಿದೆ. ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಈ ಬಗ್ಗೆ ಏನಾದರೂ ಗೊಂದಲವಿದ್ದರೆ ಇಲ್ಲಿ ಫೋನ್ ಮಾಡಿ: 9480805210