6

ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಜೂಜಾಟ: 25 ಜನರ ವಿರುದ್ಧ ಕಾನೂನು ಕ್ರಮ

ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಹಣ ಹೂಡಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಭಟ್ಕಳ ಪೊಲೀಸರು ದಾಳಿ ಮಾಡಿದ್ದಾರೆ. ಭೂಮಿಕಾ ಪ್ರೆಂಡ್ಸ ರಿಕ್ರಿಯೇಶನ್ ಕ್ಲಬ್ ಮಾಲಕ ಮಾದೇವ ನಾಯ್ಕ ಜೊತೆ 25 ಜನರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ ಕಲ್ಬಂಡಿಯಲ್ಲಿ ಭೂಮಿಕಾ ಫ್ರೆಂಡ್ಸ್ ರಿಕ್ರಿಯೆಶನ್ ಕ್ಲಬ್ ನಡೆಯುತ್ತಿತ್ತು. ನಿಯಮಾವಳಿಗಳಿಗೆ ವಿರುದ್ಧವಾಗಿ ಇಲ್ಲಿ ಇಸ್ಪಿಟ್ ಆಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ರೆಡ್ಡಿ ಅಲ್ಲಿ ದಾಳಿ ಮಾಡಿದರು. ಹಣದ ಬದಲು ಟೊಕನ್ ನೀಡಿ ಜೂಜಾಡುತ್ತಿರುವುದು ಇಲ್ಲಿ ಗೊತ್ತಾಯಿತು.

ಪೊಲೀಸರ ದಾಳಿ ವೇಳೆ ಅಲ್ಲಿದ್ದ ಮಾದೇವ ನಾಯ್ಕ ಜೊತೆ ಗಣಪತಿ ಈರಪ್ಪ ನಾಯ್ಕ, ಕುಕನೀರ್ ಹೆಬ್ಳೆ, ಪರಮೇಶ್ವರ ದುರ್ಗಪ್ಪ ನಾಯಕ ಶಿರಾಲಿ, ಸಾರದ ಹೊ¼,ೆ ದಿನೇಶ್ ಮಂಜುನಾಥ್ ನಾಯ್ಕ ಬೆಳಕೆ, ನಾಗರಾಜ್ ಮಂಜಯ್ಯ ಬಂಡಾರಿ ಬೆಳಕೆ, ವೆಂಕಟೇಶ್ ನಾರಾಯಣ ನಾಯಕ್ ಮುರುಡೇಶ್ವರ, ನಾಗಪ್ಪ ಗೋವಿಂದ ನಾಯ್ಕ ಕಲ್ಬಂಡಿ, ಗೋವಿಂದ ಗಣಪತಿ ಮೋಗೇರ್ ಅಳ್ವೆಕೊಡಿ ವಿರುದ್ಧ ಪ್ರಕರಣ ದಾಖಲಿಸಿದರು. ಇದರೊಂದಿಗೆ ಭರ್ಮಯ್ಯ ಮಾಸ್ತಪ್ಪ ನಾಯ್ಕ ಮುಂಡಳ್ಳಿ, ಶನಿಯಾರ ನಾರಾಯಣ ನಾಯ್ಕ ಗೋಳಿಬೀಳೂರು, ಶ್ರೀಧರ್ ತಿಮ್ಮಪ್ಪ ಮೊಗೇರ್, ಬಾಲಚಂದ್ರ ಕಾರ್ವಿ, ವಸಂತ್ ಚಳ್ಳ ಮೊಗೇರ್, ಶಿವರಾಜ್ ವೆಂಕಟ್ರಮಣ ನಾಯ್ಕ್ ಮುಂಡಳ್ಳಿ, ನಾಗರಾಜ್ ಲಚ್ಚಮಯ್ಯ ನಾಯ್ಕ ಮುಂಡಳ್ಳಿ, ಪಾಂಡು ಮಂಜು ಮೊಗೇರ್ ಹೆರ್ತಾರ್, ಶ್ರೀಧರ್ ಜಟ್ಟ ನಾಯ್ಕ ಮುರುಡೇಶ್ವರ ಸಹ ಸಿಕ್ಕಿಬಿದ್ದರು.

ಹರೀಶ್ ದಯಾನಂದ ಮೊಗೆರ್ ಮುಂಡಳ್ಳಿ ನಾಗೇಶ ದುರ್ಗಪ್ಪ ನಾಯ್ಕ, ಮುಂಡಳ್ಳಿ ನೀರ್ಗದ್ದೆ, ಪ್ರಶಾಂತ್ ಶೇಖರ್ ಶೇಟ್ ಬೈಂದೂರು, ನಾರಾಯಣ ಕುಪ್ಪಯ್ಯ ನಾಯ್ಕ ಆಸರಗೇರಿ, ಯೋಗೇಶ್ ವೆಂಕಟರಮಣ ಮೊಗೇರ್ ಮಾವಿನಕುರ್ವೆ, ಆನಂದ್ ಮಾದೇವ ನಾಯ್ಕ ಬೆಳ್ನಿ, ಭಾಸ್ಕರ ಬೈರಪ್ಪ ನಾಯ್ಕ ಶಿರಾಲಿ, ರವಿ ವೆಂಕಟರಮಣ ನಾಯ್ಕ ಮುಟ್ಟಳ್ಳಿ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದರು. ಈ ವೇಳೆ 2 ಸಾವಿರ ರೂ ಹಣ, ಆಟದ ಕಾರ್ಡು, ಟೋಕನ್, 2 ಕಾರು, ರಿಕ್ಷಾ ಬೈಕುಗಳನ್ನು ಪೊಲೀಸರು ವಶಕ್ಕೆಪಡೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page