ಯಲ್ಲಾಪುರದ ತೆಂಗನಗೇರಿ ಬಳಿ ಕಾರು ಹಾಗೂ ಬುಲೇರೋ ನಡುವೆ ಅಪಘಾತ ನಡೆದಿದ್ದು, ಯುವಕನೊಬ್ಬನ ಸಾವಾಗಿದೆ.
ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಉದ್ಯೋಗಿಯಾಗಿದ್ದ ದವಲ್ ಹೊರಾ (23) ಸಾವನಪ್ಪಿದವರು. ಕಲಘಟಗಿ ಮೂಲದ ಮಡಕಿ ಹೊನ್ನಳ್ಳಿಯ ದವಲ್ ಹೊರಾ ಅವರು ಕಲಘಟಗಿ ಶಾಖೆಯ ಬ್ಯಾಂಕಿನಲ್ಲಿ ಕೆಲಸಕ್ಕಿದ್ದರು. ಬ್ಯಾಂಕಿನ ಸಹದ್ಯೋಗಿಗಳ ಜೊತೆ ಶುಕ್ರವಾರ ಯಲ್ಲಾಪುರಕ್ಕೆ ಆಗಮಿಸಿದ್ದರು. ಮರಳಿ ಹುಬ್ಬಳ್ಳಿ ಕಡೆ ಹೋಗುವಾಗ ಬುಲೆರೋ ಗಾಡಿಗೆ ಬ್ಯಾಂಕಿನವರು ಇದ್ದ ಕಾರು ಡಿಕ್ಕಿಯಾಗಿದೆ.
ಯಲ್ಲಾಪುರದ ಕಡೆ ಬರುತ್ತಿದ್ದ ಬುಲೇರೋ ವಾಹನದಲ್ಲಿ ಸಿಂಟೆಕ್ಸ್, ಕಬ್ಬಿಣದ ಶೀಟ್ ಮತ್ತು ಕಬ್ಬಿಣದ ಪೈಪುಗಳಿದ್ದವು. ಕಬ್ಬಿಣದ ಪೈಪು ದವಲ್ ಹೊರಾ ಅವರ ಎದೆಗೆ ಚುಚ್ಚಿದ್ದರಿಂದ ಈ ಸಾವು ಸಂಭವಿಸಿದೆ. ಅಪಘಾತದ ರಭಸಕ್ಕೆ ಬೊಲೆರೊ ವಾಹನದಲಿದ್ದ ಶೀಟು ಕಬ್ಬಿಣದ ಪೈಪುಗಳು ಚಲ್ಲಾಪಿಲ್ಲಿಯಾದವು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.