ಸಂಬಳ ಪಡೆಯುವ ಶಿಕ್ಷಕನಿಗೆ ಬ್ಯಾಂಕ್ ಖಾತೆ ಅಪ್ಡೇಟ್ ಮಾಡುವುದಾಗಿ ನಂಬಿಸಿದ ಸೈಬರ್ ವಂಚಕರು 70 ಸಾವಿರ ರೂ ಲಪಟಾಯಿಸಿದ್ದಾರೆ. SBI ಬ್ಯಾಂಕ್ ಸಿಬ್ಬಂದಿ ಹಣ ಕೇಳುತ್ತಿದ್ದಾರೆ ಎಂದು ನಂಬಿದ ಶಿಕ್ಷಕ ಸುರೇಶ ಶೆಟ್ಟಿ ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡಿದ್ದಾರೆ!
ಶಿರಸಿಯ ಶಾಲ್ಮಲಾ ಮಹಿಳಾ ವಸತಿ ನಿಲಯದಲ್ಲಿ ಸುರೇಶ ಶೆಟ್ಟಿ ಅವರು ಶಿಕ್ಷಕರಾಗಿದ್ದಾರೆ. ಯಲ್ಲಾಪುರ ನಾಕಾ ಬಳಿ ಅವರು ವಾಸವಾಗಿದ್ದು, ಜೂನ್ 16ರಂದು ಎಸ್ ಬಿ ಐ ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡವರೊಬ್ಬರು ಅವರಿಗೆ ಫೋನ್ ಮಾಡಿದ್ದಾರೆ. `ನಿಮ್ಮ ಸ್ಯಾಲರಿ ಖಾತೆ ಅಪ್ಡೇಟ್ ಮಾಡಬೇಕು’ ಎಂದು ಫೋನ್ ಮಾಡಿದವರು ಹೇಳಿದಾಗ ಸುರೇಶ ಶೆಟ್ಟಿ ಅವರು ತಲೆ ಅಲ್ಲಾಡಿಸಿದ್ದಾರೆ.
ಫೋನ್ ಮಾಡಿದ ವ್ಯಕ್ತಿ ಹೇಳಿದ ಪ್ರಕಾರ ಫೋನ್ ಪೇ ತೆರೆದಿದ್ದು, ಅಲ್ಲಿ ವಂಚಕರ ಯುಪಿಐ ಐಡಿ ಟೈಪ್ ಮಾಡಿದ್ದಾರೆ. ಅದಾದ ನಂತರ ತಮ್ಮ ಖಾತೆಯಲ್ಲಿದ್ದ 70 ಸಾವಿರ ರೂ ಹಣವನ್ನು ವಂಚಕರ ಖಾತೆಗೆ ಜಮಾ ಮಾಡಿದ್ದಾರೆ. ಜೊತೆಗೆ ಅವರು ಹೇಳಿದ ಪ್ರಕಾರ ಹಣ ಜಮಾ ಆದ ಸ್ಕಿçÃನ್‌ಶಾಟ್’ನ್ನು ಅವರ ಫೋನಿಗೆ ಕಳುಹಿಸಿದ್ದಾರೆ. 70 ಸಾವಿರ ಪಾವತಿ ನಂತರವೂ ಬ್ಯಾಂಕ್ ಅಕೊಂಟ್ ಅಪ್ಡೇಟ್ ಆಗದ ಕಾರಣ ಮತ್ತೆ ಆ ಫೋನ್ ನಂಗೆ ಕರೆ ಮಾಡಿದ್ದಾರೆ.
ಆಗ, ಫೋನ್ ರಿಸಿವ್ ಮಾಡಿದ ಸಿಬ್ಬಂದಿ ಎಸ್‌ಬಿಐ ಬ್ಯಾಂಕಿನವರಲ್ಲ ಎಂದು ಗೊತ್ತಾಗಿದೆ. 70 ಸಾವಿರ ಮರಳಿಸುವಂತೆ ಕೇಳಿಕೊಂಡರೂ ಹಣ ಕೊಡದ ಕಾರಣ ಸುರೇಶ ಶೆಟ್ಟಿ ಅವರು ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.