ಕಾರವಾರದ ಬಾಂಡಿಶೆಟ್ಟಾದಲ್ಲಿ ವಾಸವಾಗಿದ್ದ ಅಂಕೋಲಾದ ನರೇಶ ಗಾಂವಕರ್ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ.
ಅಂಕೋಲಾ ಪೂಜಗೇರಿಯ ನರೇಶ ಗಾಂವಕರ್ ಅವರು ಕಾರವಾರದ ಬಾಂಡಿಶೆಟ್ಟಾದ ದೇವತಿಶಟ್ಟಾ ಬಳಿ ವಾಸವಾಗಿದ್ದರು. ಜೂನ್ 18ರಂದು ಅವರು ಹಬ್ಬುವಾಡ ರಸ್ತೆಯ ಹರಿದೇವನಗರದ ಬಳಿ ಅಡ್ಡಾದಿಡ್ಡಿ ಅಲೆದಾಡುತ್ತಿದ್ದರು. ಎಪಿಎಂಸಿ ಮಾರುಕಟ್ಟೆ ಗೇಟ್ ಬಳಿ ಪೊಲೀಸರು ಅವರು ವಿಚಾರಣೆಗೆ ಒಳಪಡಿಸಿದಾಗ ಅಮಲಿನಲ್ಲಿರುವುದು ಗೊತ್ತಾಯಿತು. ಅದಾಗಿಯೂ ಪಿಐ ರಮೇಶ್ ಹೂಗಾರ್ ನರೇಶ ಗಾಂವಕರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಆಗ, ವೈದ್ಯರು ಸಹ ನರೇಶ ಗಾಂವಕರರ್ ಗಾಂಜಾ ಸೇವಿಸಿರುವುದನ್ನು ಖಚಿತಪಡಿಸಿದರು. ಹೀಗಾಗಿ ಪೊಲೀಸರು ವ್ಯಸನಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದರು.
ಗೋಕರ್ಣದಲ್ಲಿ ಮುಂದುವರೆದ ದಾಳಿ
ಗೋಕರ್ಣದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ದೀಪಕ ಮುಕ್ರಿ ಸಹ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ.
ಬಂಗ್ಲೆಗುಡ್ಡದಲ್ಲಿ ವಾಸವಾಗಿದ್ದ ದೀಪಕ ಮುಕ್ರಿ ಜೂ 19ರಂದು ಬಂಗ್ಲೆಗುಡ್ಡ ಪ್ರವಾಸಿ ಮಂದಿರದ ಬಳಿ ನಶೆಯಲ್ಲಿದ್ದರು. ಪಿಐ ಶ್ರೀಧರ್ ಎಸ್ ಆರ್ ಅವರನ್ನು ವಿಚಾರಣೆಗೆ ಒಳಪಡಿಸಿ, ಆಸ್ಪತ್ರೆಗೆ ಕರೆತಂದರು. ವೈದ್ಯಾಧಿಕಾರಿಗಳು ನೀಡಿದ ವರದಿಯಲ್ಲಿ ದೀಪಕ ಮುಕ್ರಿ ಗಾಂಜಾ ನಶೆಯಲ್ಲಿರುವುದು ಖಚಿತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.