ಯಲ್ಲಾಪುರದ ಡಬ್ಗುಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ BSNL ಟವರ್ ಸಾಮಗ್ರಿಗಳು ಕಳ್ಳರ ಪಾಲಾಗಿದೆ.
ಶಿರಸಿಯ ಜಯಲಕ್ಷ್ಮಿ ಬಿಲ್ಟೆಕ್ ಪ್ರೆö ಲಿ ಕಂಪನಿಯವರು ಡಬ್ಗುಳಿಯಲ್ಲಿ ಟವರ್ ನಿರ್ಮಿಸುತ್ತಿದ್ದರು. ಇದಕ್ಕಾಗಿ ಅವರು ಕಬ್ಬಿಣ ಹಾಗೂ ಉಕ್ಕಿನ ಸಾಮಗ್ರಿಗಳನ್ನು ಸ್ಥಳದಲ್ಲಿ ದಾಸ್ತಾನು ಮಾಡಿದ್ದರು. ಜೂನ್ 14ರ ಬೆಳಗ್ಗೆ ಅಲ್ಲಿದ್ದ ಸಾಮಗ್ರಿಗಳು ಜೂನ್ 17ರ ಸಂಜೆ ಹೋಗಿ ನೋಡಿದಾಗ ಕಣ್ಮರೆಯಾಗಿದ್ದವು.
58760ರೂ ಮೌಲ್ಯದ ಕಬ್ಬಿಣ ಹಾಗೂ ಉಕ್ಕು, 46920ರೂ ಮೌಲ್ಯದ ಪ್ಲೇಟುಗಳನ್ನು ಕಳ್ಳರು ಅಪಹರಿಸಿದ್ದರು. ಇದರೊಂದಿಗೆ 15400ರೂ ಮೌಲ್ಯದ ರಾಡು, 22120ರೂ ಮೌಲ್ಯದ ನೆಟ್ ಬೋಲ್ಟು, 16800ರೂ ಮೌಲ್ಯದ ವಾಶರ್‌ನ್ನು ದೋಚಿದ್ದರು. ಒಟ್ಟು 1.60 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಕಾಣೆಯಾದ ಬಗ್ಗೆ ಕಂಪನಿಯ ಪ್ರೊಜೆಕ್ಟ್ ಮೆನೆಜಮೆಂಟ್ ಆಫಿಸರ್ ಪ್ರಸನ್ನ ಹೆಗಡೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರಿದ್ದಾರೆ.
`ಸದ್ಯ ಸುರಕ್ಷತೆ ದೃಷ್ಠಿಯಿಂದ ಅಲ್ಲಿರುವ ಇನ್ನಿತರ ಎಲ್ಲಾ ಸಾಮಗ್ರಿಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ. ಮಳೆ ಕಡಿಮೆಯಾದ ನಂತರ ಟವರ್ ನಿರ್ಮಾಣ ಕೆಲಸ ವೇಗಪಡೆಯಲಿದ್ದು, ಕಳ್ಳತನವಾಗದಂತೆ ತಡೆಯಲು ಊರಿನವರ ಸಹಕಾರವೂ ಅಗತ್ಯ’ ಎಂದು ಜಯಲಕ್ಷ್ಮಿ ಬಿಲ್ಟೆಕ್ ಪ್ರೆö ಲಿ ಕಂಪನಿ ಮುಖ್ಯಸ್ಥ ಸುಹಾಸ್ ಹೆಗಡೆ ಪ್ರತಿಕ್ರಿಯಿಸಿದರು.