ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಟಿಎಸ್‌ಎಸ್ ಸಂಸ್ಥೆ ಇದೀಗ `ಉಪ್ಪಿನಕಾಯಿ’ ಮಾರಾಟದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಅಧಿಕಾರ ಹಾಗೂ ರಾಜಕೀಯ ಕೆಸರಾಟದಲ್ಲಿ ಮುಳುಗಿರುವ ಟಿಎಸ್‌ಎಸ್ ಪರ ಹಾಗೂ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಈ ನಡುವೆ ಮಂಗಳವಾರ ಟಿಎಸ್‌ಎಸ್ ಗ್ರಾಹಕರೊಬ್ಬರು ಉಪ್ಪಿನಕಾಯಿ ಖರೀದಿಸಿ, ಅದರಲ್ಲಿ ಹುಳವಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಶಿರಸಿಯ ಟಿಎಸ್‌ಎಸ್ ಸೂಪರ್ ಮಾರ್ಕೇಟಿನಲ್ಲಿ ಸೌಮ್ಯ ಭಟ್ಟ ಎಂಬಾತರು ಉಪ್ಪಿನಕಾಯಿ ಡಬ್ಬಿ ಖರೀದಿಸಿದ್ದರು. ಡಬ್ಬಿಯ ಮೇಲ್ಬಾಗ ಅಂಟಿಸಿದ ಚೀಟಿಯಲ್ಲಿ ಇನ್ನೂ ಅವಧಿ ಮುಗಿದಿರಲಿಲ್ಲ. ಆದರೆ, ಮನೆಗೆ ತಂದು ನೋಡಿದಾಗ ಉಪ್ಪಿನಕಾಯಿ ಹಾಳಾಗಿತ್ತು. ಇದರಿಂದ ಆಕ್ರೋಶಗೊಂಡ ಅವರು ಫೇಸ್ಬುಕ್ ಖಾತೆಯಲ್ಲಿ `ಉಪ್ಪಿನಕಾಯಿ ಕಥೆ’ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅನೇಕರು `ಇದು ಟಿಎಸ್‌ಎಸ್ ತಪ್ಪಲ್ಲ. ಉಪ್ಪಿನಕಾಯಿ ಉತ್ಪಾದಕರ ತಪ್ಪು’ ಎಂದಿದ್ದಾರೆ. ಇನ್ನೂ ಕೆಲವರು `ತಮಗೂ ಇದೇ ರೀತಿಯ ಅನುಭವ ಆಗಿದೆ’ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು `ಉಪ್ಪಿನಕಾಯಿ ಮರಳಿಸಿ, ಹಣ ಪಡೆಯಿರಿ’ ಎಂಬ ಸಲಹೆಯನ್ನು ಸಹ ನೀಡಿದ್ದಾರೆ. ಇನ್ನೊಬ್ಬರು ಹೊಸ ಆಡಳಿತ ಮಂಡಳಿ ಹಾಗೂ ಹಳೆ ಆಡಳಿತ ಮಂಡಳಿಯ ಮೇಲೆ ಆರೋಪ ಹೋರಿಸಿ ಕಮೆಂಟ್ ಮಾಡಿದ್ದಾರೆ. ಆಹಾರ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವುದಕ್ಕಾಗಿ ಈ ಬರಹ ಪ್ರಕಟಿಸಿರುವುದಾಗಿ ಸೌಮ್ಯಾ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಇದೀಗ ಉಪ್ಪಿನಕಾಯಿ ವಿಷಯವಾಗಿ ಟಿಎಸ್‌ಎಸ್ ಮತ್ತೆ ಸುದ್ದಿಯಾಗಿದೆ.
Discussion about this post